ಕರ್ನಾಟಕ

karnataka

ETV Bharat / state

ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮ್ಮ ಭೂಮಿ ನೀಡುವುದು ಅಸಾಧ್ಯ : ಪದ್ಮಶ್ರೀ ಸುಕ್ರಿ ಬೊಮ್ಮಗೌಡ

ವಿಮಾನ ನಿಲ್ದಾಣದಿಂದ ಭೂಮಿ ಕಳೆದುಕೊಳ್ಳುವ ಬಾವಿಕೇರಿ, ಅಲಗೇರಿ, ಬೇಲೆಕೇರಿ ಗ್ರಾಮದಲ್ಲಿ ಆಗೇರ ಸಮುದಾಯದ 19 ಮನೆಗಳು ಹಾಗೂ ಎರಡು ಎಕರೆ ಭೂಮಿ ವಶಕ್ಕೆ ಪಡೆಯಲಾಗುತ್ತಿದೆ. ಅಲ್ಲದೇ ಹಾಲಕ್ಕಿ ಗೌಡ ಸಮುದಾಯದ ಕೆಲವರ ಮನೆ ಹಾಗೂ ಭೂಮಿಯನ್ನ ಸಹ ವಶಕ್ಕೆ ಪಡೆಯುತ್ತಿದ್ದಾರೆ..

By

Published : Sep 15, 2020, 7:54 PM IST

we-don-not-let-our-land-to-build-air-port-construction-sukri-bommagouda-said
ಪದ್ಮಶ್ರೀ ಸುಕ್ರಿ ಬೊಮ್ಮಗೌಡ

ಕಾರವಾರ :ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಹೇಳಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಪೈಕಿ ಸ್ಥಳೀಯ ನಿವಾಸಿಗಳ ಸುಮಾರು ಐದಾರು ಎಕರೆ ಜಮೀನು ಸ್ವಾಧೀನಗೊಳ್ಳಲಿದೆ. ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬದಲು ಈಗಾಗಲೇ ಖಾಲಿ ಬಿದ್ದಿರುವ ಜಾಗಗಳನ್ನು ಬಳಸಿಕೊಳ್ಳಬೇಕು. ಆದರೆ, ನಮ್ಮ ಜಾಗಗಳನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಮಾನ ನಿಲ್ದಾಣ ನಿರ್ಮಾಣ ಕುರಿತು ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಹೇಳಿಕೆ

ಅಲಗೇರಿ ವಿಮಾನ ನಿಲ್ದಾಣ ಹೋರಾಟ ಸಮಿತಿಯ ಕಾರ್ಯದರ್ಶಿ ಮಹೇಶ್‌ಗೌಡ ಮಾತನಾಡಿ, ಸಮಿತಿಯ ಕೆಲವರು ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಗಮನಕ್ಕೆ ಬರದೇ ಕೆಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಸಮಿತಿಯ ಅಧ್ಯಕ್ಷ ಸುರೇಶ್ ನಾಯಕ್ ನಾವು ಭೂಮಿ ಕೊಡಲು ಸಿದ್ಧರಿಲ್ಲ ಎಂದಿದ್ದರು. ಆದರೆ, ಇದೀಗ ಸಮಿತಿಯವರ ಗಮನಕ್ಕೆ ತರದೇ ಜಿಲ್ಲಾಧಿಕಾರಿಗಳ ಬಳಿ ಬೇಡಿಕೆ ಕೊಟ್ಟು ಹೋಗಿದ್ದಾರೆ. ನಮ್ಮನ್ನು ಬಳಸಿ ರಾಜಕೀಯ ಮಾಡಲು ಹೊರಟಿದ್ದು ಇದಕ್ಕೆ ನಮ್ಮ ಬೆಂಬಲವಿಲ್ಲ. ಇದೇ ಕಾರಣಕ್ಕೆ ನಾವು ಸಮಿತಿಗೆ ರಾಜೀನಾಮೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ವಿಮಾನ ನಿಲ್ದಾಣದಿಂದ ಭೂಮಿ ಕಳೆದುಕೊಳ್ಳುವ ಬಾವಿಕೇರಿ, ಅಲಗೇರಿ, ಬೇಲೆಕೇರಿ ಗ್ರಾಮದಲ್ಲಿ ಆಗೇರ ಸಮುದಾಯದ 19 ಮನೆಗಳು ಹಾಗೂ ಎರಡು ಎಕರೆ ಭೂಮಿ ವಶಕ್ಕೆ ಪಡೆಯಲಾಗುತ್ತಿದೆ. ಅಲ್ಲದೇ ಹಾಲಕ್ಕಿ ಗೌಡ ಸಮುದಾಯದ ಕೆಲವರ ಮನೆ ಹಾಗೂ ಭೂಮಿಯನ್ನ ಸಹ ವಶಕ್ಕೆ ಪಡೆಯುತ್ತಿದ್ದಾರೆ. ನಾವೆಲ್ಲ ನಿರಾಶ್ರಿತರಾಗಿ ಬಂದು ಬದುಕು ಕಟ್ಟಿಕೊಂಡಿದ್ದು ಇದೀಗ ವಿಮಾನ ನಿಲ್ದಾಣಕ್ಕಾಗಿ ಮತ್ತೆ ನಿರಾಶ್ರಿತರಾಗಬೇಕಾಗಿದೆ.

ಆದ ಕಾರಣ ನಾವು ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ. ನಮ್ಮ ಸಮುದಾಯದ ಗುರುಗಳಾದ ಆದಿಚುಂಚನಗಿರಿ ಸ್ವಾಮೀಜಿಯವರ ಬಳಿ ತೆರಳಿ ನಮ್ಮ ಸಮಸ್ಯೆ ಹೇಳಿಕೊಂಡು ನಮ್ಮ ಪರ ಹೋರಾಟಕ್ಕೆ ಬೆಂಬಲ ಕೊಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.

For All Latest Updates

ABOUT THE AUTHOR

...view details