ಕಾರವಾರ:ಉತ್ತರ ಕನ್ನಡಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಅದರಲ್ಲಿಯೂ ಘಟ್ಟದ ಮೇಲ್ಭಾಗದ ತಾಲೂಕುಗಳಲ್ಲಿ ಮಳೆ ವ್ಯಾಪಕವಾಗಿ ಸುರಿಯತೊಡಗಿದೆ.
ಕಾಳಿ ನದಿ ತೀರದ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕದ್ರಾ ಜಲಾಶಯಕ್ಕೆ ಯಥೇಚ್ಛವಾಗಿ ನೀರು ಹರಿದುಬಂದಿದ್ದು, ಜಲಾಶಯದಿಂದ ನೀರನ್ನ ನಿರಂತರವಾಗಿ ಹೊರ ಬಿಡಲಾಗುತ್ತಿದೆ. ಇಂದು ಕೂಡ 1.5 ಲಕ್ಷ ಕ್ಯೂಸೆಕ್ ನೀರನ್ನ ಹೊರಬಿಟ್ಟಿದ್ದು, ಕಾಳಿ ನದಿ ತೀರದ ಜನರಲ್ಲಿ ಸಂಕಷ್ಟ ಎದುರಾಗಿದೆ.