ಕರ್ನಾಟಕ

karnataka

ETV Bharat / state

ಕದ್ರಾ ಜಲಾಶಯದಿಂದ ಕಾಳಿನದಿಗೆ ನೀರು... ರಕ್ಷಿಸಿ ಅಂತಾ ಗೋಗರಿಯುತ್ತಿರುವ ಮಹಿಳೆಯರು - Water from Kadra Reservoir to khali river

ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹೊರಬಿಡಲಾಗುತ್ತಿದ್ದು, ಕಾಳಿ ನದಿಯಂಚಿನ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಮ್ಮನ್ನು ರಕ್ಷಿಸಿ ನಿರಾಶ್ರಿತರು ಕಣ್ಣೀರು ಹಾಕುತ್ತಿದ್ದಾರೆ.

ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು...ರಕ್ಷಣೆಗಾಗಿ ಗೋಗರಿಯುತ್ತಿರುವ ಜನರು

By

Published : Aug 8, 2019, 5:36 PM IST

Updated : Aug 8, 2019, 7:18 PM IST

ಕಾರವಾರ:ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹೊರಬಿಡುತ್ತಿದ್ದು, ಕಾಳಿ ನದಿಯಂಚಿನ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಹೀಗಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಮ್ಮನ್ನು ರಕ್ಷಿಸಿ ಎಂದು ಮಹಿಳೆಯರು ಜಿಲ್ಲಾಡಳಿತಕ್ಕೆ ಮೊರೆಯಿಟ್ಟಿದ್ದಾರೆ.

ಕದ್ರಾ ಜಲಾಶಯದಿಂದ ಕಾಳಿನದಿಗೆ ನೀರು... ರಕ್ಷಿಸಿ ಅಂತಾ ಗೋಗರಿಯುತ್ತಿರುವ ಮಹಿಳೆಯರು

ಕದ್ರಾ, ಕೊಡಸಳ್ಳಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ, ಕದ್ರಾ ಜಲಾಶಯದಿಂದ 1.5 ಲಕ್ಷ ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಕಾರವಾರದ ಕಾಳಿ ನದಿಯಂಚಿನ ಕಿನ್ನರ ಖಾರ್ಗೆಜೂಗ, ಭರತವಾಡ ಸೇರಿದಂತೆ ಸುಮಾರು 30 ಹಳ್ಳಿಗಳಲ್ಲಿ ನೆರೆಹಾವಳಿ ಸೃಷ್ಟಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಈ ಭಾಗದಲ್ಲಿ ನಿರೀಕ್ಷೆಗೂ ಮೀರಿ ನೆರೆ ಬಂದಿದ್ದು, ಸುಮಾರು 400 ಮನೆಗಳು ಮುಳುಗಡೆಯಾಗಿವೆ. ಜನರನ್ನು ಸ್ಥಳೀಯರು, ಪೊಲೀಸರು ದೋಣಿಗಳ ಮೂಲಕ ತರಲು ಹರಸಾಹಸ ಪಡುತ್ತಿದ್ದಾರೆ.

ಕಿನ್ನರದಲ್ಲಿ ಸುಮಾರು 30 ಜನರು ನೀರಿನ ಮಧ್ಯದಲ್ಲಿ ಸಿಲುಕಿಕೊಂಡಿದ್ದು, ವಾಹನಗಳು ಬಾರದ ಹಿನ್ನೆಲೆ ಬೋಟ್​ಗಾಗಿ ಅಂಗಲಾಚಿದ್ದಾರೆ. ನೀರು ಬರುವ ಬಗ್ಗೆ ಯಾವುದೇ ಮುನ್ಸೂಚನೆ ನೀಡದೆ ಇರುವುದೇ, ಇಷ್ಟೊಂದು ತೊಂದರೆಗೆ ಕಾರಣ. ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿ ಕಾಲ ಕಳೆಯುತ್ತಿದ್ದೇವೆ. ಊಟ ಬಿಟ್ಟು ಗಂಜಿ ಕೇಂದ್ರದಲ್ಲಿ ಬೇರೆನೂ ಸಿಗುತ್ತಿಲ್ಲ. ದನಕರುಗಳನ್ನು ಕಾಡಿನಲ್ಲಿ ಕಟ್ಟಿದ್ದು, ಅವುಗಳಿಗೆ ‌ಮೇವು ನೀಡುವುದಕ್ಕೂ ಆಗುತ್ತಿಲ್ಲ. ನಮ್ಮ ಸಂಕಷ್ಟಕ್ಕೆ ಯಾರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.

ಸಮಸ್ಯೆ ಆಲಿಸಲು ಸ್ಥಳ್ಕಕಾಗಮಿಸಿದ್ದ ಶಾಸಕಿ ರೂಪಾಲಿ ‌ನಾಯ್ಕ ಅವರು, ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಆದರೆ ಇನ್ನು ಕೆಲವೊಂದಿಷ್ಟು ವಸ್ತುಗಳು ಬರುತ್ತಿದ್ದು, ಮಾರ್ಗಮಧ್ಯ ರಸ್ತೆ ಬಂದಾಗಿರುವ ಕಾರಣ ವಿಳಂಬವಾಗುತ್ತಿದೆ. ತಾಲೂಕಿನ ಸುಮಾರು ಹಳ್ಳಿಗಳು ಮುಳುಗಿದ್ದು, ಎಲ್ಲ ಜನರಿಗೂ ಗಂಜಿ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಅಭಯ ನೀಡಿದ್ದಾರೆ.

Last Updated : Aug 8, 2019, 7:18 PM IST

ABOUT THE AUTHOR

...view details