ಕರ್ನಾಟಕ

karnataka

ETV Bharat / state

ಕುಮಟಾದಲ್ಲಿ ವಾರ್ಡ್ ಬದಲಾವಣೆ ಆರೋಪ; ತಮ್ಮ ಮತ ಹಾಕಲಾಗದ ಸ್ಥಿತಿಯಲ್ಲಿ ಅಭ್ಯರ್ಥಿಗಳು! - ಗ್ರಾಮ ಪಂಚಾಯ್ತಿ ಚುನಾವಣೆ 2020

ದೇವಗಿರಿ ಗ್ರಾ.ಪಂ. ವ್ಯಾಪ್ತಿಯ ದೇವಗಿರಿ ಹಾಗೂ ಮಠ ವಾರ್ಡ್​​ನ ಮತದಾರರ ಹೆಸರನ್ನು ತಮ್ಮ ವಾರ್ಡ್​ ಹೊರತು ಪಡಿಸಿ, ಕಡೇಕೋಡಿ ವಾರ್ಡ್​​​​ನ ಮತದಾರ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಮತ ಚಲಾಯಿಸಲಾಗದೇ ಅಭ್ಯರ್ಥಿಗಳು ಕೂಡ ಪರದಾಡಿದ ಘಟನೆ ನಡೆದಿದೆ.

ward exchange alligation during village panchayath election
ಕುಮಟಾದಲ್ಲಿ ವಾರ್ಡ್ ಬದಲಾವಣೆ ಆರೋಪ

By

Published : Dec 22, 2020, 5:38 PM IST

ಕಾರವಾರ: ಮತದಾನ ಪಟ್ಟಿಯಲ್ಲಿ ಮತದಾರರ ಹಾಗೂ ಅಭ್ಯರ್ಥಿಯ ಹೆಸರು ಇಲ್ಲದಿರುವುದಕ್ಕೆ ಗೊಂದಲ ಸೃಷ್ಟಿಯಾದ ಘಟನೆ ಕುಮಟಾ ತಾಲೂಕಿನ ದೇವಗಿರಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.

ಕುಮಟಾದಲ್ಲಿ ವಾರ್ಡ್ ಬದಲಾವಣೆ ಆರೋಪ

ದೇವಗಿರಿ ಗ್ರಾ.ಪಂ. ವ್ಯಾಪ್ತಿಯ ದೇವಗಿರಿ ಹಾಗೂ ಮಠ ವಾರ್ಡ್​​ನ ಮತದಾರರ ಹೆಸರನ್ನು ತಮ್ಮ ವಾರ್ಡ್​ ಹೊರತುಪಡಿಸಿ, ಕಡೇಕೋಡಿ ವಾರ್ಡಿನ ಮತದಾರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಿಂದಾಗಿ ತಾವು ನಿಂತ ವಾರ್ಡ್​ಗೆ ಮತ ಹಾಕಲಾಗದೇ ಅಭ್ಯರ್ಥಿಗಳು ಹಾಗೂ ಮತದಾರರು ಪೇಚಿಗೆ ಸಿಲುಕಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಮತದಾರರನ್ನು ಕಡೇಕೋಡಿ, ಹರನೀರ ವಾರ್ಡ್​ಗೆ ​ಸೇರ್ಪಡೆ ಮಾಡಲಾಗಿತ್ತು. ಆದರೆ, ಈಗ 2015 ರಲ್ಲಿರುವ ಗ್ರಾ.ಪಂ ಪಟ್ಟಿಯಂತೆ ಕಡೇಕೋಡಿ ವಾರ್ಡ್​ಗೆ ಪುನಃ ಸೇರಿಸಲಾಗಿದೆ. ಆದರೆ, ಚುನಾವಣೆ ಘೋಷಣೆ ಆಗಿದ್ದಾಗ ವಿಧಾನಸಭೆ ಚುನಾವಣೆಯಲ್ಲಿ ವಿಂಗಡನೆ ಮಾಡಿದ ವಾರ್ಡ್​ನಂತೆ ವಿಂಗಡಿಸಲಾಗಿತ್ತು. ಆದರೆ, ಇದೀಗ ಬೇರೆ ವಾರ್ಡ್ ಮತದಾನ ಪಟ್ಟಿಯಲ್ಲಿ ಸೇರಿಸಿದ್ದರಿಂದ ಅಭ್ಯರ್ಥಿಗಳೇ ತಮ್ಮ ಕ್ಷೇತ್ರದಲ್ಲಿ ಮತ ಹಾಕದಂತಾಗಿದ್ದು, ಈ ಬಗ್ಗೆ ಅಭ್ಯರ್ಥಿಗಳು ಹಾಗೂ ಮತದಾರರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇನ್ನು ಈ ಗೊಂದಲದಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಇದನ್ನೂ ಓದಿ:ಅಜ್ಮೀರಾ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣ: ಆಸ್ತಿ ಜಪ್ತಿ ಮಾಡಿದ ಇಡಿ

ABOUT THE AUTHOR

...view details