ಕರ್ನಾಟಕ

karnataka

ETV Bharat / state

ಕೈಕೊಟ್ಟ ಇವಿಎಂ ಮಷಿನ್: ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತ..! - Kheni Village of Ankola Taluk

ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮತದಾನ ನಡೆಯುತ್ತಿದೆ. ಆದರೆ, ಅಂಕೋಲಾ ತಾಲೂಕಿನ ಖೇಣಿ ಗ್ರಾಮದಲ್ಲಿ ಇವಿಎಂ ವಿವಿ ಪ್ಯಾಟ್ ಮಷಿನ್ ಬಂದ್​ ಆಗಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ನಡೆಯಲಿಲ್ಲ.

Assembly election
Etv Bharat

By

Published : May 10, 2023, 3:46 PM IST

ಕೈಕೊಟ್ಟ ಇವಿಎಂ ಮಷಿನ್: ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತ

ಕಾರವಾರ:ಇವಿಎಂ ವಿವಿ ಪ್ಯಾಟ್ ಮಷಿನ್ ಕೈಕೊಟ್ಟ ಕಾರಣ ಒಂದು ಗಂಟೆವರೆಗೆ ಮತದಾನ ಸ್ಥಗಿತಗೊಂಡ ಘಟನೆ ಅಂಕೋಲಾ ತಾಲೂಕಿನ ಖೇಣಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಖೇಣಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 204ರಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭಿಸಲಾಗಿತ್ತಾದರೂ ಬೆಳಿಗ್ಗೆ 11.50 ಸುಮಾರಿಗೆ ಮತಯಂತ್ರ ಕೈಕೊಟ್ಟಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ‌ ಮತದಾನ ಸ್ಥಗಿತಗೊಂಡಿತ್ತು.

ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದ ಮತದಾರರು ಸಾಲುಗಟ್ಟಿನಿಂತಿದ್ದರು. ಈ ವೇಳೆ ಮತಯಂತ್ರ ಸ್ಥಗಿತಗೊಂಡಿತ್ತು. ಒಟ್ಟು 82 ಮಂದಿ ಮತ ಚಲಾವಣೆ ಮಾಡಿದ ನಂತರ ಮತಯಂತ್ರ ಕೈಕೊಟ್ಟಿದೆ. ಪಿಆರ್​ಓಗಳು ತಕ್ಷಣವೇ ಆರ್​ಓಗಳ ಗಮನಕ್ಕೆ ತಂದರು. ಒಂದು ಗಂಟೆ ನಂತರ ಮತಯಂತ್ರವನ್ನು ಬದಲಾಯಿಸಲಾಯಿತು. ಮತದಾನಕ್ಕೆ ವಿಳಂಬವಾದ ಕಾರಣ ಸ್ಥಳೀಯರು ಒಂದು ಗಂಟೆ ಹೆಚ್ಚುವರಿಯಾಗಿ ನೀಡಲು ಒತ್ತಾಯಿಸಿದರು. ಆದರೆ, ಅಧಿಕಾರಿಗಳು ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ಪುನಃ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತದಾನ ವಿಳಂಬವಾದ ಕಾರಣ ಮಧ್ಯಾಹ್ನದ ವೇಳೆಗೆ ಮತಗಟ್ಟೆಯಲ್ಲಿ ದೊಡ್ಡ ಸಾಲು ಕಂಡುಬಂತು.

ಇವುಗಳನ್ನು ಓದಿ:

ABOUT THE AUTHOR

...view details