ಕರ್ನಾಟಕ

karnataka

ETV Bharat / state

ಗೋವು ಕಳ್ಳತನಕ್ಕೆ ಯತ್ನ... ಆರೋಪಿಗಳಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ

ಹೊನ್ನಾವರದ ಮುಗಳಿಯಲ್ಲಿ ಗೋವು ಕಳ್ಳತನ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಭಟ್ಕಳ ಮೂಲದ ನಾಲ್ವರಿಗೆ ಗ್ರಾಮಸ್ಥರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Cow thieves
ಗೋಕಳ್ಳರು

By

Published : Feb 28, 2020, 4:43 PM IST

ಕಾರವಾರ: ಗೋವುಗಳನ್ನು ಕದ್ದೊಯ್ಯಲು ಯತ್ನಿಸಿರುವ ಆರೋಪದಡಿ ನಾಲ್ವರನ್ನು ಗ್ರಾಮಸ್ಥರೇ ಹಿಡಿದು ಧರ್ಮದೇಟು ನೀಡಿ ಬಳಿಕ ಪೊಲೀಸರಿಗೊಪ್ಪಿಸಿದ ಘಟನೆ ಹೊನ್ನಾವರ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ಕಾರಿನಲ್ಲಿ ಬಂದಿದ್ದ ಭಟ್ಕಳ ಮೂಲದ ನಾಲ್ವರು ಯುವಕರು, ರಸ್ತೆ ಬದಿಯಲ್ಲಿದ್ದ ಗೋವುಗಳನ್ನು ಹಿಡಿದು ಕಾರಿನ ಮೂಲಕ ಸಾಗಿಸಲು ಯತ್ನಿಸಿದ್ದರು ಎನ್ನಲಾಗ್ತಿದೆ. ಇದನ್ನು ತಿಳಿದ ಸ್ಥಳೀಯ ಯುವಕರು ಸುತ್ತಮುತ್ತಲಿನವರಿಗೆ ಕರೆ ಮಾಡಿ ಆರೋಪಿಗಳನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಸಹ ಖದೀಮರಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಶಪಡಿಸಿಕೊಂಡಿರುವ ವಾಹನ
ಗೋವು ಕಳ್ಳತನಕ್ಕೆ ಯತ್ನ, ಗ್ರಾಮಸ್ಥರಿಂದ ಆರೋಪಿಗಳಿಗೆ ಬೀದಿಯಲ್ಲೇ ಧರ್ಮದೇಟು
ವಶಪಡಿಸಿಕೊಂಡಿರುವ ವಾಹನ

ಈ ಕುರಿತು ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಕೃತ್ಯಕ್ಕೆ ಬಳಸಿದ್ದ ಕಾರನ್ನು ಸಹ ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details