ಕಾರವಾರ :ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೊನೆಗೂ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಐತಿಹಾಸಿಕ ಗೆಲುವಿನೊಂದಿಗೆ ಅನಂತಕುಮಾರ್ ಆರನೇ ಬಾರಿ ಸಂಸತ್ ಪ್ರವೇಶಿಸಿದ್ದಾರೆ.
ಎದುರಾಳಿ ಶಿಷ್ಯನ ವಿರುದ್ಧವೇ ಗುರುವಿಗೆ ಐತಿಹಾಸಿಕ ಗೆಲುವು!
ಹೌದು ಒಂದು ಕಾಲದಲ್ಲಿ ಬಿಜೆಪಿಯಲ್ಲಿ ಗುರು ಶಿಷ್ಯರಾಗಿದ್ದ ಅನಂತಕುಮಾರ್ ಹೆಗಡೆ ಹಾಗೂ ಆನಂದ್ ಅಸ್ನೋಟಿಕರ್ ಲೋಕಸಭಾ ಚುನಾವಣೆಯಲ್ಲಿ ಎದುರು ಬದುರಾಗಿ ಸ್ಪರ್ಧಿಸಿ ಬಿಗ್ ಪೈಟ್ ನಡೆಸಿದ್ದರು. ಗುರುವಿನ ವಿರುದ್ಧವೇ ತೊಡೆ ತಟ್ಟಿದ್ದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಭರ್ಜರಿ ಪ್ರಚಾರ ನಡೆಸಿದ್ದರು.
ಕೊನೆ ಹಂತದಲ್ಲಿ ಆನಂದ್ ಅಸ್ನೋಟಿಕರ್ ಗೆ ಜಿಲ್ಲೆಯ ಕಾಂಗ್ರೆಸ್ ನಾಯಕರ ಬೆಂಬಲ ಸಿಕ್ಕಿತ್ತಾದರೂ ಏಕಾಂಗಿಯಾಗಿ ಕ್ಷೇತ್ರವನ್ನು ಸುತ್ತುತ್ತಾ ಅನಂತಕುಮಾರ್ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದರು. ಆದರೂ ಮತದಾರ ಪ್ರಭುಗಳು ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆಯನ್ನು ಬೆಂಬಲಿಸಿದ್ದು, ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಇನ್ನು ಅನಂತಕುಮಾರ್ ಹೆಗಡೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧಿಸಿ ಆರು ಗೆಲುವುಗಳನ್ನು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಇತಿಹಾಸ ಬರೆದಿದ್ದಾರೆ. ಈ ಹಿಂದೆ ಕಾಂಗ್ರೆಸ್ ನ ದೇವರಾಯ ಜಿ ನಾಯ್ಕ ಮಾತ್ರ ಸತತ ನಾಲ್ಕು ಬಾರಿ ಗೆಲುವು ದಾಖಲಿಸಿದ್ದರು. ಇದೀಗ ಈ ದಾಖಲೆ ಸರಿಗಟ್ಟುವ ಜೊತೆಗೆ ಅತಿ ಹೆಚ್ಚು ಗೆಲುವ ದಾಖಲಿಸಿದವರ ಪೈಕಿ ಅನಂತಕುಮಾರ್ ಮೊದಲಿಗರಾಗಿದ್ದಾರೆ.
ಪ್ರಭಾವ ಬೀರಿದ ಮೋದಿ ಅಲೆ!