ಕರ್ನಾಟಕ

karnataka

ETV Bharat / state

ಉತ್ತರಕನ್ನಡ: ತಿರಸ್ಕೃತ ಮತದಿಂದ ಗೆಲುವಿನ ಪುರಸ್ಕಾರ ಪಡೆದ ವೀಣಾ ಗೌಡ - vanalli grama panchayat

ವಾನಳ್ಳಿ ಗ್ರಾಮ ಪಂಚಾಯತ್ ಗೋಣಸರ ವಾರ್ಡ್ ಅಭ್ಯರ್ಥಿ ವೀಣಾ ಗೌಡ ಅವರು ಪಾರ್ವತಿ ಗೌಡ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.

veena gowda
ಗೋಣಸರ ವಾರ್ಡ್ ಅಭ್ಯರ್ಥಿ ವೀಣಾ ಗೌಡ

By

Published : Dec 30, 2020, 12:26 PM IST

ಉತ್ತರಕನ್ನಡ: ಶಿರಸಿ ತಾಲೂಕಿನ ವಾನಳ್ಳಿ ಗ್ರಾಮ ಪಂಚಾಯತ್​​​ ಗೋಣಸರ ವಾರ್ಡ್​​​ ಅಭ್ಯರ್ಥಿ ವೀಣಾ ಗೌಡ ಅವರು ತಿರಸ್ಕೃತ ಮತ ಸ್ಪಷ್ಟವಾದ ನಂತರ ಗೆಲುವು ಕಂಡಿದ್ದಾರೆ.

ಓದಿ: ಐದು ಜನರ ಮೊಬೈಲ್ ಸ್ವಿಚ್‌ಆಫ್ : ಜಿಲ್ಲಾಡಳಿತಕ್ಕೆ ತಲೆನೋವಾದ ಫಾರಿನ್ ರಿಟರ್ನ್ಸ್‌

ವಾನಳ್ಳಿ ಗ್ರಾ.ಪಂ ಗೋಣಸರ ವಾರ್ಡ್ ಅಭ್ಯರ್ಥಿ ವೀಣಾ ಗೌಡ ಅವರು ಪಾರ್ವತಿ ಗೌಡ ವಿರುದ್ಧ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಬ್ಬರು ತಲಾ 127 ಮತಗಳನ್ನು ಪಡೆದಿದ್ದರು.

ಪಾರ್ವತಿ ಗೌಡಗೆ ಹಾಕಿದ ಮತದ ಶಾಹಿ ಗುರುತು, ವೀಣಾ ಗೌಡರವರ ಆಟೋ ರಿಕ್ಷಾ ಚಿಹ್ನೆಗೆ ತಾಗಿದ ಕಾರಣ ತಿರಸ್ಕೃತಗೊಂಡಿತ್ತು. ಹೀಗಾಗಿ ಮರು ಎಣಿಕೆಯಲ್ಲಿ ಮತ ಸ್ಪಷ್ಟವಾಗಿ, ಒಂದು ಮತದ ಅಂತರದಲ್ಲಿ ವೀಣಾ ಗೌಡ ಅವರನ್ನು ವಿಜಯಿ ಎಂದು ಘೋಷಣೆ ಮಾಡಲಾಗಿದೆ.

ABOUT THE AUTHOR

...view details