ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಕೊರೊನಾಗೆ 2 ಬಲಿ: ಸಾವಿರ ಗಡಿಯತ್ತ ಸೋಂಕಿತರ ಸಂಖ್ಯೆ

ಅಂಕೋಲಾ ಹಾಗೂ ಹಳಿಯಾಳದಲ್ಲಿ ತಲಾ ಒಬ್ಬರಂತೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಜಿಲ್ಲೆಯ ಕೊರೊನಾ ಸಾವಿನ ಸಂಖ್ಯೆ 203ಕ್ಕೆ ಏರಿಕೆಯಾದಂತಾಗಿದೆ.

Corona case
Corona case

By

Published : Apr 24, 2021, 10:23 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿಂದು 164 ಮಂದಿಯಲ್ಲಿ‌ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಸಕ್ರಿಯ ಸೋಂಕಿತರ ಸಂಖ್ಯೆ 966ಕ್ಕೆ ಏರಿಕೆಯಾಗುವ ಮೂಲಕ ಸಾವಿರದ ಗಡಿ ಸಮೀಪಿಸಿದೆ.

ಸೋಂಕಿತರ ಪೈಕಿ 130 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 836 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳ ಸಂಖ್ಯೆ 17,035 ಆಗಿದೆ.

ಇಂದು ಅಂಕೋಲಾ ಹಾಗೂ ಹಳಿಯಾಳದಲ್ಲಿ ತಲಾ ಒಬ್ಬರಂತೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಜಿಲ್ಲೆಯ ಕೊರೊನಾ ಸಾವಿನ ಸಂಖ್ಯೆ 203ಕ್ಕೆ ಏರಿಕೆಯಾದಂತಾಗಿದೆ.

ಕಾರವಾರ 62, ಅಂಕೋಲಾ 10, ಕುಮಟಾ 19, ಹೊನ್ನಾವರ 5, ಭಟ್ಕಳ 1, ಶಿರಸಿ 21, ಸಿದ್ದಾಪುರ 10, ಯಲ್ಲಾಪುರ 18, ಮುಂಡಗೋಡ 4, ಹಳಿಯಾಳ 12 ಹಾಗೂ ಜೋಯಿಡಾದಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು ಇಂದು 71 ಮಂದಿ ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ ಬಿಡುಗಡೆಗೊಂಡ ಕೊರೊನಾ ಸೋಂಕಿತರ ಸಂಖ್ಯೆ 15,866ಕ್ಕೆ ಏರಿಕೆಯಾದಂತಾಗಿದೆ.

ABOUT THE AUTHOR

...view details