ಕರ್ನಾಟಕ

karnataka

ETV Bharat / state

ಉತ್ತರಕನ್ನಡದಲ್ಲಿ 455 ಮಂದಿ ಗುಣಮುಖ: 158 ಜನರಲ್ಲಿ ಸೋಂಕು ಪತ್ತೆ - 455 people cured from corona

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 455 ಸೋಂಕಿತರು ಗುಣಮುಖರಾಗಿದ್ದು,158 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 8,555 ಪ್ರಕರಣಗಳು ಪತ್ತೆಯಾಗಿವೆ.

ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ

By

Published : Sep 22, 2020, 6:58 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 455 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಮತ್ತೆ 158 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕು ಪತ್ತೆಯಾದವರ ಪೈಕಿ ಕಾರವಾರ 45, ಅಂಕೋಲಾ 10, ಕುಮಟಾ 15, ಶಿರಸಿ 7, ಯಲ್ಲಾಪುರ 6, ಮುಂಡಗೋಡ 59, ಹಳಿಯಾಳದ 13 ಹಾಗೂ ಜೊಯಿಡಾದ 3 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಅಂಕೋಲಾ 15, ಕುಮಟಾ 45, ಹೊನ್ನಾವರ 47, ಭಟ್ಕಳ 45, ಶಿರಸಿ 213, ಸಿದ್ದಾಪುರ 21, ಯಲ್ಲಾಪುರ 51, ಮುಂಡಗೋಡ 16, ಹಳಿಯಾಳದ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 8,555 ಪ್ರಕರಣಗಳು ಪತ್ತೆಯಾಗಿದ್ದು, 6,491 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 110 ಮಂದಿ ಸಾವನ್ನಪ್ಪಿದ್ದು, 1954 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details