ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಮತ್ತೆ 36 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 471ಕ್ಕೆ ಏರಿಕೆಯಾಗಿದೆ.
ಪತ್ತೆಯಾದ ಬಹುತೇಕ ಪ್ರಕರಣಗಳು ಸೋಂಕಿತರ ಪ್ರಾಥಮಿಕ ಸಂಪರ್ಕ ಹಾಗೂ ವಿದೇಶ, ಹೊರ ರಾಜ್ಯದಿಂದ ಬಂದವರಾಗಿದ್ದಾರೆ. ನಿನ್ನೆಯಂತೆಯೇ ಇಂದು ಕೂಡ ಜಿಲ್ಲೆಯ ಭಟ್ಕಳದಲ್ಲಿ ಅತೀ ಹೆಚ್ಚು ಅಂದರೆ 19 ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ 12 ಮಂದಿ ಪುರುಷರು, 7 ಮಂದಿ ಮಹಿಳೆಯರು ಸೇರಿದ್ದಾರೆ.
ಕಾರವಾರದಲ್ಲಿಯೂ 6 ಪ್ರಕರಣಗಳು ಪತ್ತೆಯಾಗಿದ್ದು, 4 ಮಂದಿ ಪುರುಷರು ಹಾಗೂ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಉಳಿದಂತೆ ಹಳಿಯಾಳದಲ್ಲಿ 3, ಹೊನ್ನಾವರ 2, ಕುಮಟಾ 2, ಶಿರಸಿ 2, ಜೋಯಿಡಾ 1 ಹಾಗೂ ಮುಂಡಗೋಡದಲ್ಲಿ 1 ಪ್ರಕರಣ ಪತ್ತೆಯಾಗಿದೆ.
ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 471ಕ್ಕೆ ಏರಿಕೆಯಾಗಿದ್ದು, 182 ಮಂದಿ ಗುಣಮುಖರಾಗಿದ್ದಾರೆ. 288 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಇಬ್ಬರು ಸಾವನ್ನಪ್ಪಿದ್ದಾರೆ.