ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿಂದು 23 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆಯಾಗಿದೆ.
ಉತ್ತರ ಕನ್ನಡದಲ್ಲಿಂದು 23 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆ - corona news
ಉತ್ತರ ಕನ್ನಡ ಜಿಲ್ಲೆಯ ಇಂದು 23 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 512 ಸೋಂಕಿತರು ಪತ್ತೆಯಾಗಿದ್ದು, 210 ಮಂದಿ ಗುಣಮುಖರಾಗಿದ್ದಾರೆ. 300 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಪತ್ತೆಯಾದ ಸೋಂಕಿತರ ಪೈಕಿ ಕಾರವಾರದ 10 ಮಂದಿ ಇದ್ದು, 7 ಮಂದಿ ಯುವಕರು, ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಸಿದ್ದಾಪುರದಲ್ಲಿ ವೈದ್ಯ ಹಾಗೂ ಓರ್ವ ಸಹಾಯಕ ಮತ್ತು ಇಬ್ಬರು ಯುವತಿ ಮತ್ತು ಓರ್ವ ಯುವಕ ಸೇರಿ ಐವರಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ಹೊನ್ನಾವರ, ಯಲ್ಲಾಪುರದಲ್ಲಿ ತಲಾ 2, ಭಟ್ಕಳ, ಶಿರಸಿ, ಹಳಿಯಾಳ ಹಾಗೂ ಮುಂಡಗೋಡದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 512 ಸೋಂಕಿತರು ಪತ್ತೆಯಾಗಿದ್ದು, 210 ಮಂದಿ ಗುಣಮುಖರಾಗಿದ್ದಾರೆ. 300 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.