ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 214 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 7774ಕ್ಕೆ ಏರಿಕೆಯಾಗಿದೆ.
ಉತ್ತರಕನ್ನಡದಲ್ಲಿ 214 ಮಂದಿಗೆ ಸೋಂಕು: 52 ಮಂದಿ ಗುಣಮುಖ - 214 people have corona
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 214 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 52 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.
ಶಿರಸಿ ತಾಲೂಕಿನಲ್ಲಿ 62, ಕುಮಟಾ 37, ಹೊನ್ನಾವರ 32, ಹಳಿಯಾಳ 27, ಕಾರವಾರ 20, ಅಂಕೋಲಾ 17, ಯಲ್ಲಾಪುರ 7, ಭಟ್ಕಳ 6, ಸಿದ್ದಾಪುರ 5, ಮುಂಡಗೋಡದ ಓರ್ವನಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಹಳಿಯಾಳ 26, ಮುಂಡಗೋಡ 6, ಸಿದ್ದಾಪುರ 7, ಶಿರಸಿ 2, ಹೊನ್ನಾವರ 6, ಕುಮಟಾದ 5 ಜನ ಸೇರಿ 52 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರ ಸಂಖ್ಯೆ 1018 ಇದ್ದು, ಹೋಮ್ ಕ್ವಾರಂಟೈನ್ನಲ್ಲಿರುವ ಸೋಂಕಿತರ ಸಂಖ್ಯೆ 1305 ಆಗಿದೆ. ಈ ಮೂಲಕ ಜಿಲ್ಲೆಯ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 2323ಕ್ಕೆ ಏರಿಕೆಯಾದಂತಾಗಿದೆ. ಇದುವರೆಗೆ ಕೊರೊನಾ ಸೋಂಕಿನಿಂದ 5357 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.