ಕರ್ನಾಟಕ

karnataka

ETV Bharat / state

ಸಮುದ್ರದ ಅಲೆಗೆ ಕೊಚ್ಚಿ ಹೋದ ವಿದ್ಯಾರ್ಥಿ ಸಾವು! - ETV Bharath Karnataka

ಶಾಲಾ ಪ್ರವಾಸದಲ್ಲಿ ಮರುಡೇಶ್ವರಕ್ಕೆ ಬಂದ ವಿದ್ಯಾರ್ಥಿ ಸಮುದ್ರದಲ್ಲಿ ಆಟ ಆಡುವಾಗ ಅಲೆಗೆ ಸಿಲುಕಿ ಸಾವನ್ನಪ್ಪಿದ್ದಾನೆ.

student dies in sea
ಸಮುದ್ರದ ಅಲೆಗೆ ಕೊಚ್ಚಿ ಹೋದ ವಿದ್ಯಾರ್ಥಿ ಸಾವು

By

Published : Dec 24, 2022, 7:52 AM IST

ಕಾರವಾರ(ಉತ್ತರ ಕನ್ನಡ): ಪ್ರವಾಸಕ್ಕೆ ಬಂದು ನೀರಿನಲ್ಲಿ ಈಜಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಅಲೆಗೆ ಕೊಚ್ಚಿಹೋಗಿ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ. ಚಿತ್ರದುರ್ಗ ಮೂಲದ ಮಹಮ್ಮದ್ ಫಾಝಿಲ್ (16) ಸಾವನ್ನಪ್ಪಿದ ವಿದ್ಯಾರ್ಥಿ.

ಚಿತ್ರದುರ್ಗದಿಂದ ಮರುಡೇಶ್ವರಕ್ಕೆ ಶಾಲಾ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ಕೊಚ್ಚಿ ಹೋಗಿದ್ದಾನೆ. ತಕ್ಷಣ ಕೂಗಿಕೊಂಡರೂ ಯಾರು ರಕ್ಷಣೆಗೆ ಧಾವಿಸಿರಲಿಲ್ಲ. ಲೈಫ್ ಗಾರ್ಡ್​​ಗಳು ಕೂಡ ಬೋಟ್ ರೈಡಿಂಗ್​ನಲ್ಲಿ ನಿರತರಾಗಿದ್ದರು. ನಂತರ ಬಂದರಾದರೂ ಸುಮಾರು ಒಂದು ಗಂಟೆಗಳ ಕಾಲ ಹುಡುಕಾಟದ ಬಳಿಕ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ.

ಜನರ ರಕ್ಷಣೆ ನೇಮಕವಾದ ಲೈಫ್ ಗಾರ್ಡ್​ಗಳು ಬೋಟಿಂಗ್​ನಲ್ಲಿ ತೊಡಗಿಕೊಂಡಿದ್ದರಿಂದ ಸರಿಯಾದ ಸಮಯಕ್ಕೆ ರಕ್ಷಣೆಗೆ ದಾವಿಸಿಲ್ಲ.‌‌ ಅಲ್ಲದೇ ಮಕ್ಕಳು ನೀರಿನ ಆಳಕ್ಕೆ ತೆರಳುತ್ತಿದ್ದರು ಯಾರೊಬ್ಬರು ಎಚ್ಚರಿಕೆ ನೀಡುತ್ತಿಲ್ಲ. ಪ್ರವಾಸಿಗರು ಕೂಡ ನಿರ್ಲಕ್ಷ್ಯ ತಾಳುವ ಕಾರಣ ಇಂತಹ ದುರ್ಘಟನೆಗಳು ನಡೆಯುತ್ತಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದಿದ್ದಾರೆ.

ಇದನ್ನೂ ಓದಿ:ಆಟೋ - ಟ್ರ್ಯಾಕ್ಟರ್ ನಡುವೆ ಡಿಕ್ಕಿ: ಬಿಲ್ವಿದ್ಯೆ ಕ್ರೀಡಾಪಟುಗಳಿಬ್ಬರ ಸಾವು

For All Latest Updates

ABOUT THE AUTHOR

...view details