ಕಾರವಾರ: ಕೋವಿಡ್-19ನಿಂದ ಮರಣ ಪ್ರಮಾಣ ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ನಡೆಸಿದ ಹಿರಿಯ ನಾಗರಿಕರ ಆರೋಗ್ಯ ಸಮೀಕ್ಷೆ ಮುಕ್ತಾಯಗೊಂಡಿದೆ. 6,569 ಹಿರಿಯರ ರಕ್ತದಲ್ಲಿ ಸಕ್ಕರೆ ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವುದು ಹಾಗೂ 131 ಜನರಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್‌ಕುಮಾರ್ ಕೆ ಹೇಳಿದರು.
ಕೊರೊನಾ ಮರಣ ಪ್ರಮಾಣ ತಗ್ಗಿಸಲು ಹಿರಿಯ ನಾಗರಿಕರ ಆರೋಗ್ಯ ಸಮೀಕ್ಷೆ - corona died percentage
ನಿಗದಿತ ಪ್ರಮಾಣಕ್ಕಿಂತ ಸಕ್ಕರೆ ಅಂಶ ಮತ್ತು ಆಮ್ಲಜನಕದ ಪ್ರಮಾಣದಲ್ಲಿ ವ್ಯತ್ಯಾಸವಿರುವವರಿಗೆ ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ..
![ಕೊರೊನಾ ಮರಣ ಪ್ರಮಾಣ ತಗ್ಗಿಸಲು ಹಿರಿಯ ನಾಗರಿಕರ ಆರೋಗ್ಯ ಸಮೀಕ್ಷೆ uttara kannada senior citizen health survey](https://etvbharatimages.akamaized.net/etvbharat/prod-images/768-512-8789672-1034-8789672-1600010314156.jpg)
ಜಿಲ್ಲೆಯಾದ್ಯಂತ ಸೆ.4ರಿಂದ 11ರವರೆಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನಡೆಸಿದ ಹಿರಿಯ ನಾಗರಿಕರ ಆರೋಗ್ಯ ಸಮೀಕ್ಷೆಯಲ್ಲಿ ಒಟ್ಟು 1,37,717 ಜನರನ್ನು ಸಮೀಕ್ಷೆ ಮಾಡಲಾಗಿದೆ. ಅದರಲ್ಲಿ ಒಟ್ಟು 6,569 ಹಿರಿಯರಲ್ಲಿ ರಕ್ತದ ಸಕ್ಕರೆ ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವುದು (140 mg ಗಿಂತ ಹೆಚ್ಚು), ಹಾಗೂ 131 ಜನರಲ್ಲಿ ಆಮ್ಲಜನಕದ ಪ್ರಮಾಣ ಶೇ. 92ಕ್ಕಿಂತ ಕಡಿಮೆ ಇರುವುದು ಪತ್ತೆಯಾಗಿದೆ.
ದೇಹದಲ್ಲಿ ಸಕ್ಕರೆ ಅಂಶ ಹಾಗೂ ಆಮ್ಲಜನಕದ ಪ್ರಮಾಣ ಅಳೆಯುವ ಸಲುವಾಗಿ ಪಲ್ಸ್ ಆಕ್ಸಿಮೀಟರ್ ಮತ್ತು ಗ್ಲೂಕೊ ಮೀಟರ್ ಬಳಸಲಾಗಿತ್ತು. ನಿಗದಿತ ಪ್ರಮಾಣಕ್ಕಿಂತ ಸಕ್ಕರೆ ಅಂಶ ಮತ್ತು ಆಮ್ಲಜನಕದ ಪ್ರಮಾಣದಲ್ಲಿ ವ್ಯತ್ಯಾಸವಿರುವವರಿಗೆ ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ. ಅಲ್ಲದೇ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನಿರಂತರ ನಿಗಾವಹಿಸಲು ಸೂಚಿಸಲಾಗಿದೆ ಎಂದರು.