ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಮಂಗನ ಕಾಯಿಲೆ ಭೀತಿ..ಒಂದೇ ದಿನ 5 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಂದೆಡೆ ಕೊರೊನಾ ವೈರಸ್​ ಭೀತಿ ಇದ್ದರೆ, ಮತ್ತೊಂದೆಡೆ ಮಂಗನ ಕಾಯಿಲೆ ಭೀತಿ ಎದುರಾಗಿದೆ. ಉತ್ತರ ಕನ್ನಡದ ಸಿದ್ಧಾಪುರದಲ್ಲಿ ಇದುವರೆಗೂ 33 ಪ್ರಕರಣಗಳು ವರದಿಯಾಗಿದ್ದು ಇಂದೂ ಕೂಡಾ 5 ಪ್ರಕರಣ ಪತ್ತೆಯಾಗಿವೆ.

Monkey fever
ಮಂಗನ ಕಾಯಿಲೆ

By

Published : Apr 13, 2020, 10:05 PM IST

ಶಿರಸಿ (ಉತ್ತರ ಕನ್ನಡ):ಬಹುತೇಕ ವಿಶ್ವದ ಎಲ್ಲಾ ರಾಷ್ಟ್ರಗಳು ಕೊರೊನಾ ವೈರಸ್​ನಿಂದ ತತ್ತರಿಸುತ್ತಿವೆ. ಇಟಲಿ ಹಾಗೂ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ಧಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 245 ಕ್ಕೆ ಬಂದು ತಲುಪಿದೆ. ಇನ್ನೂ ಹೆಚ್ಚಿನ ಅನಾಹುತ ಸಂಭವಿಸಬಾರದು ಎಂಬ ಉದ್ದೇಶದಿಂದ ಏಪ್ರಿಲ್ 30 ವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ.

ಇನ್ನು ರಾಜ್ಯದಲ್ಲಿ ಒಂದು ಕಡೆ ಕೊರೊನಾ ಭೀತಿ ಇದ್ದರೆ ಮತ್ತೊಂದು ಕಡೆ ಮಂಗನ ಕಾಯಿಲೆ ಭಯ ಕಾಡುತ್ತಿದೆ. ಕೆಲವೆಡೆ ಹಕ್ಕಿಜ್ವರ ಕೂಡಾ ಇದೆ. ಶಿವಮೊಗ್ಗ ಮಾತ್ರವಲ್ಲದೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಕೂಡಾ ಮಂಗನ ಕಾಯಿಲೆ ಭೀತಿಯಿಂದ ಜನರು ಆತಂಕಕ್ಕೆ ಒಳಗಾಗಿದ್ಧಾರೆ. ಜಿಲ್ಲೆಯಲ್ಲಿ ಇದುವರೆಗೂ 33 ಮಂದಿಗೆ ಮಂಗನ ಕಾಯಿಲೆ ಹಬ್ಬಿದೆ. ಇಂದೂ ಕೂಡಾ 5 ಕೇಸ್ ಪಾಸಿಟಿವ್ ಪ್ರಕರಣ ಕಂಡುಬಂದಿರುವುದಾಗಿ ಆರೋಗ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಸಿದ್ದಾಪುರದ ಕೋರ್ಲಕೈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಪ್ರಕರಣ ಕಂಡುಬಂದಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ABOUT THE AUTHOR

...view details