ಶಿರಸಿ(ಉತ್ತರ ಕನ್ನಡ): ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಸಂಸತ್ ಅಧಿವೇಶನ ಸಂದರ್ಭದಲ್ಲಿ ನಡೆಸಿದ ಕಡ್ಡಾಯ ಕೋವಿಡ್ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.
ಮಾಸ್ಕ್ ಹಾಕಿದ್ದವರನ್ನ ಕಪಿಗೆ ಹೋಲಿಸಿದ್ದ ಅನಂತ್‌ಕುಮಾರ್ ಹೆಗ್ಡೆಗೇ ಕೊರೊನಾ - ಉತ್ತರ ಕನ್ನಡ ಸಂಸದ
ಯಾವುದೇ ಕಾರ್ಯಕ್ರಮದಲ್ಲಿಯೂ ಮಾಸ್ಕ್ ಕೂಡ ಧರಿಸದೇ ಇರುತ್ತಿದ್ದ ಹೆಗಡೆ, ಮಾಸ್ಕ್ ಧರಿಸಿದವರನ್ನು ರಾಮಾಯಣದ ಕಪಿಗಳಿಗೆ ಈ ಹಿಂದೆ ಹೋಲಿಸಿದ್ದರು..
ಅನಂತಕುಮಾರ್ ಹೆಗಡೆ
ಈ ಹಿಂದೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊರೊನಾ ಇಲ್ಲ ಏನೂ ಇಲ್ಲ, ಇವೆಲ್ಲ ಬರೀ ಗಿಮಿಕ್, ಇದು ಕೆಲ ಕಂಪನಿಗಳು ಲಾಭ ಗಳಿಕೆಗಾಗಿ ಕ್ರಿಯೇಟ್ ಮಾಡಿರುವುದು ಎಂದು ಹೇಳಿಕೆ ನೀಡಿದ್ದ ಅನಂತ್‌ಕುಮಾರ್ ಹೆಗಡೆ ಈಗ ಅದೇ ಸೋಂಕಿನಿಂದ ಬಳಲುವಂತಾಗಿದೆ.
ಯಾವುದೇ ಕಾರ್ಯಕ್ರಮದಲ್ಲಿಯೂ ಮಾಸ್ಕ್ ಕೂಡ ಧರಿಸದೇ ಇರುತ್ತಿದ್ದ ಹೆಗಡೆ, ಮಾಸ್ಕ್ ಧರಿಸಿದವರನ್ನು ರಾಮಾಯಣದ ಕಪಿಗಳಿಗೆ ಈ ಹಿಂದೆ ಹೋಲಿಸಿದ್ದರು. ಇದನ್ನು ಸರ್ಕಾರದ ವಿರುದ್ಧದ ಹೇಳಿಕೆ ಎಂದು ಆ ಸಂದರ್ಭದಲ್ಲಿ ವಿಶ್ಲೇಷಣೆ ಮಾಡಲಾಗಿತ್ತು.