ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 236 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 82 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಉತ್ತರಕನ್ನಡದಲ್ಲಿ 236 ಮಂದಿಗೆ ಕೊರೊನಾ... 82 ಮಂದಿ ಗುಣಮುಖ - ಕಾರವಾರದಲ್ಲಿ ಗುಣಮುಖರಾದವರ ಸುದ್ದಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದ್ದು, ಇಂದು ಹೊಸದಾಗಿ 236 ಜನರಿಗೆ ಪಾಸಿಟಿವ್ ಬಂದಿದೆ. ಇಂದು ಒಂದೇ ದಿನ 82 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

82 ಮಂದಿ ಗುಣಮುಖ
ಸೋಂಕು ಪತ್ತೆಯಾದ ಪೈಕಿ ಕಾರವಾರ 69, ಅಂಕೋಲಾ 33, ಕುಮಟಾ 30, ಹೊನ್ನಾವರ 27, ಭಟ್ಕಳ 1, ಶಿರಸಿ 4, ಸಿದ್ದಾಪುರ 32, ಯಲ್ಲಾಪುರ 24, ಹಳಿಯಾಳದಲ್ಲಿ 16 ಮಂದಿಗೆ ಸೋಂಕು ದೃಢಪಟ್ಟಿದೆ.
ಇನ್ನು ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರ 13, ಅಂಕೋಲಾ 4, ಕುಮಟಾ 13, ಹೊನ್ನಾವರ 39, ಮುಂಡಗೋಡ 4, ಜೊಯಿಡಾ 2 ಹಾಗೂ ಹಳಿಯಾಳದ 7 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 6336 ಪ್ರಕರಣಗಳು ಪತ್ತೆಯಾಗಿದ್ದು, 4520 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 66 ಮಂದಿ ಸಾವನ್ನಪ್ಪಿದ್ದು, 1750 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.