ಕಾರವಾರ: ಸ್ಕಿಡ್ ಆಗಿ ಬಿದ್ದ ಪರಿಣಾಮ ಜಿಲ್ಲಾ ಪಂಚಾಯತ್ ಎಂಜಿನಿಯರ್‌ರೊಬ್ಬರ ಬೈಕ್ ಸಂಪೂರ್ಣ ಹೊತ್ತಿ ಉರಿದಿರುವ ಘಟನೆ ಸಿದ್ದಾಪುರ-ಕುಮಟಾ ರಸ್ತೆಯ ದೊಡ್ಮನೆ ಘಾಟ್ ಬಳಿ ನಡೆದಿದೆ.
ಸ್ಕಿಡ್ ಆಗಿ ಬಿದ್ದು ಹೊತ್ತಿ ಉರಿದ ಬೈಕ್.. ಜಿಪಂ ಎಂಜಿನಿಯರ್ ಸ್ವಲ್ಪದರಲ್ಲೇ ಪಾರು.. - A bike that fell into a skid
ಸ್ಕಿಡ್ ಆಗಿ ಬಿದ್ದ ಪರಿಣಾಮ ಜಿಪಂ ಎಂಜಿನಿಯರ್‌ರೊಬ್ಬರ ಬೈಕ್ ನಡು ರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ. ಬೈಕ್ ಸವಾರ ಎಂಜಿನಿಯರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿದ್ದಾಪುರ ಜಿಲ್ಲಾ ಪಂಚಾಯತ್ ಎಂಜಿನಿಯರ್ ಮಣಿಕಂಠ ಪೂಜಾರಿ ಎಂಬುವರ ಬೈಕ್ ಸುಟ್ಟು ಕರಕಲಾಗಿದೆ. ಹೊನ್ನಾವರ ತಾಲೂಕಿನ ಕಡತೋಕದಿಂದ ಸಿದ್ದಾಪುರಕ್ಕೆ ಬಜಾಜ್ ವಿಕ್ರಾಂತ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹುಲ್ದಾರ್ ಗದ್ದೆ ಬಳಿ ಸ್ಕಿಡ್ ಆಗಿ ಬಿದ್ದಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.
ಘಟನಾ ಸ್ಥಳಕ್ಕೆ ಸ್ಥಳೀಯರು ಧಾವಿಸಿ ಬಂದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಎಂಜಿನಿಯರ್ ಮಣಿಕಂಠ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ದೊಡ್ಮನೆ ಘಾಟ್ ಅತೀ ಹೆಚ್ಚು ತಿರುವು ಮುರುವಾಗಿದ್ದು, ರಸ್ತೆ ಕೂಡ ಸಂಪೂರ್ಣ ಹದಗೆಟ್ಟಿದ್ದೆ. ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದರೂ, ರಸ್ತೆ ದುರಸ್ತಿಗೆ ಮಾತ್ರ ಸಂಬಂಧಪಟ್ಟವರು ಮುಂದಾಗಿಲ್ಲ. ಆದ್ದರಿಂದ ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.