ಕರ್ನಾಟಕ

karnataka

ETV Bharat / state

ಕೆಡಿಸಿಸಿ ಚುನಾವಣೆ ; 10 ಕ್ಷೇತ್ರದಿಂದ 23 ಅಭ್ಯರ್ಥಿಗಳ ಭವಿಷ್ಯ ಬುಧವಾರ ನಿರ್ಧಾರ - District Intermediary Bank Election

ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ (ಕೆಡಿಸಿಸಿ) ಚುನಾವಣೆ ನಾಳೆ (ನ.11 ರಂದು) ನಡೆಯಲಿದೆ. ಕಣದಲ್ಲಿ 23 ಸ್ಪರ್ಧಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ..

Uttara Kannada District Intermediary Bank (KDCC) Election
ಸಂಗ್ರಹ ಚಿತ್ರ

By

Published : Nov 10, 2020, 10:58 PM IST

ಶಿರಸಿ : ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ (ಕೆಡಿಸಿಸಿ) ಬುಧವಾರ ಚುನಾವಣೆ ನಡೆಯಲಿದೆ. 10 ಕ್ಷೇತ್ರಗಳಿಂದ 23 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, 450ಕ್ಕೂ ಅಧಿಕ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಒಟ್ಟು 16 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳ ಅವಿರೋಧ ಆಯ್ಕೆ ಹೊರತುಪಡಿಸಿ ಇನ್ನುಳಿದ 10 ಕ್ಷೇತ್ರಗಳಿಗೆ ನ.11ರಂದು ಚುನಾವಣೆ ನಡೆಯಲಿದೆ. ಹೀಗಾಗಿ, ಕಣದಲ್ಲಿನ 23 ಸ್ಪರ್ಧಿಗಳು ಜಿದ್ದಿಗೆ ಬಿದ್ದಂತೆ ತಮ್ಮ ತಮ್ಮ ಪರ ನಡೆಸಿದ್ದಾರೆ. ಕರಪತ್ರ ಮಾಡಿಕೊಂಡು ಪ್ರಚಾರ ನಡೆಸಿರುವ ಹಲವು ಸ್ಪರ್ಧಿಗಳು ತಮ್ಮ ಸಾಧನೆ, ಕಾರ್ಯಚಟುವಟಿಕೆಯ ಸಾಧನೆಯನ್ನು ತೋರಿದ್ದಾರೆ.

ಹೊಸ ಸ್ಪರ್ಧಿಗಳು ತಮ್ಮ ಕ್ಷೇತ್ರದ ವ್ಯಾಪ್ತಿಯ ಪ್ರತಿ ಮತದಾರರನ್ನು ತಲುಪುವ ಕೆಲಸ ಮಾಡಿದ್ರೆ, ಈ ಹಿಂದೆ ನಿರ್ದೇಶಕರಾಗಿ ಈಗ ಪುನರಾಯ್ಕೆ ಬಯಸುತ್ತಿರುವವರು ಹಿಂದಿನ ಚುನಾವಣೆಯಲ್ಲಿ ತಮ್ಮಪರ ಮತ ಚಲಾಯಿಸಿದವರನ್ನು ಇನ್ನಷ್ಟು ಮುತುವರ್ಜಿಯಿಂದ ನೋಡಿಕೊಂಡಿದ್ದಾರೆ.

ಹಣಾಹಣಿಯ ಕಣ :ಶಿರಸಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ರಾಮಕೃಷ್ಣ ಕಡವೆ ಹಾಗೂ ಜಿ.ಆರ್.ಹೆಗಡೆ ಬೆಳ್ಳೆಕೇರಿ ನಡುವೆ ಸ್ಪರ್ಧೆ ನಡೆಯಲಿದೆ. ಸಿದ್ದಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಷಣ್ಮುಖ ಗೌಡ ಹಾಗೂ ವಿವೇಕ ಭಟ್ಟ ಗಡಿಹಿತ್ಲು ಸೆಣೆಸಾಡಲಿದ್ದಾರೆ.

ಮುಂಡಗೋಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಲ್ಲಿ ರವಿಚಂದ್ರ ದುಗ್ಗಳ್ಳಿ ಹಾಗೂ ಎಲ್.ಟಿ.ಪಾಟೀಲ್ ನಡುವೆ ಹಾಗೂ ಕುಮಟಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶ್ರೀಧರ ಭಾಗ್ವತ್ ಮತ್ತು ಗಜಾನನ ಪೈ ನಡುವೆ ನೇರ ಹಣಾಹಣಿ ನಡೆಯಲಿದೆ.

ಅಂಕೋಲಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ವಿಜಯ ಕುಮಾರ ನಾಯಕ ಮತ್ತು ಬೀರಣ್ಣ ನಾಯಕ ನಡುವೆ ಸ್ಪರ್ಧೆ ಇದ್ದರೆ, ಹೊನ್ನಾವರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶಿವಾನಂದ ಕಡತೋಕಾ ಮತ್ತು ಮಹಾಬಲೇಶ್ವರ ಹೆಗಡೆ ಸ್ಪರ್ಧಿಸಲಿದ್ದಾರೆ.

ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಜಿ.ಆರ್.ಹೆಗಡೆ ಸೋಂದಾ, ಗಿರೀಶ ಭಟ್ಟ, ಚಂದ್ರು ದೇವಾಡಿಗ, ವಿನಾಯಕ ಹೆಗಡೆ ನಡುವೆ ಸ್ಪರ್ಧೆ ನಡೆಯಲಿದೆ. ಔದ್ಯೋಗಿಕ ಸಹಕಾರಿ ಸಂಘಗಳ (ನೇಕಾರರ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಿಂದ ಜಿ.ಟಿ.ಹೆಗಡೆ ತಟ್ಟಿಸರ ಮತ್ತು ವಿಶ್ವನಾಥ ಭಟ್ಟ ಹೊನ್ನಾವರ ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ.

ಅರ್ಬನ್ ಬ್ಯಾಂಕು ಹಾಗೂ ಕೃಷಿಯೇತರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಮೋಹನದಾಸ ನಾಯಕ, ವಸಂತ ನಾಯಕ, ಎಸ್.ಎಂ.ಹೆಗಡೆ ಮಾನೀಮನೆ ಸೆಣಸಲಿದ್ದಾರೆ. ಹಾಲು ಉತ್ಪಾದಕರ/ಕಾರ್ಮಿಕರ/ಕೂಲಿಕಾರರ/ಇತರೇ ಸಹಕಾರಿ ಸಂಘಗಳ (ಫಾರ್ಮಿಂಗ್​ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಿಂದ ಸುರೇಶ್ಚಂದ್ರ ಕೆಶಿನ್ಮನೆ ಮತ್ತು ಭಾಸ್ಕರ ಹೆಗಡೆ ಕಾಗೇರಿ ನಡುವೆ ಹಣಾಹಣಿ ನಡೆಯಲಿದೆ.

ABOUT THE AUTHOR

...view details