ಕರ್ನಾಟಕ

karnataka

ETV Bharat / state

ಗದ್ದೆ ನಾಟಿ ಮಾಡಿ ಕೃಷಿ ಜಾಗೃತಿಗೆ ಸಾಥ್​ ನೀಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ - ರವೀಂದ್ರನಾಥ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರದಾನ

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನಾಟಿ ಕಾರ್ಯಕ್ಕೆ ಪಂಚೆ-ಶಲ್ಯವನ್ನುಟ್ಟು ಚಾಲನೆ ನೀಡಿ ಬಳಿಕ ಸಸಿ ಮಡಿಗಳನ್ನು ಹಿಡಿದು ನಾಟಿ‌ ಕಾರ್ಯ ಕೂಡ ಮಾಡಿದರು. ಜಿಲ್ಲಾಧಿಕಾರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್ ಕೆ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ್ ನಿಶ್ಚಲ್ ನರೋನಾ ಸೇರಿದಂತೆ ಜಿಲ್ಲಾ ಕೇಂದ್ರದ ಪತ್ರಕರ್ತರೂ ಸಾಥ್ ನೀಡಿದರು..

ಕೃಷಿ ಜಾಗೃತಿಗೆ ಸಾಥ್​ ನೀಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ
ಕೃಷಿ ಜಾಗೃತಿಗೆ ಸಾಥ್​ ನೀಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ

By

Published : Aug 1, 2021, 6:43 PM IST

Updated : Aug 1, 2021, 7:09 PM IST

ಕಾರವಾರ:ಕೃಷಿಯಿಂದ ವಿಮುಖರಾಗುತ್ತಿದ್ದವರನ್ನು ಮರಳಿ ಕೃಷಿಯತ್ತ ಸೆಳೆಯುವ ನಿಟ್ಟಿನಲ್ಲಿ ಕಾರವಾರದಲ್ಲಿ ಆಯೋಜಿಸಿದ್ದ ಗದ್ದೆ ನಾಟಿ ಕಾರ್ಯಕ್ರಮವೊಂದರಲ್ಲಿ ಸ್ವತಃ ಜಿಲ್ಲಾಧಿಕಾರಿಯೇ ಗದ್ದೆಗೆ ಇಳಿದು ನಾಟಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕೃಷಿ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗುತ್ತಿದೆ. ಇದರ ನಡುವೆ ಪ್ರವಾಹದ ಅಬ್ಬರಕ್ಕೆ ಸಾಕಷ್ಟು ಕೃಷಿ ಭೂಮಿಗಳೂ ಹಾನಿಯಾಗಿ, ಕೃಷಿ ಮಾಡುವವರು ಕೂಡ ಕೃಷಿಯಿಂದ ಹಿಂದೆ ಸರಿಯುವ ಸಂದರ್ಭ ಎದುರಾಗಿದೆ. ಆದರೆ, ಇಂತವರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಕಾರವಾರ ಜಿಲ್ಲಾ ಪತ್ರಕರ್ತರು ಪತ್ರಿಕಾ ದಿನಾಚರಣೆಯನ್ನು ಗದ್ದೆ ನಾಟಿ ಕಾರ್ಯಕ್ರಮದ ಮೂಲಕ ವಿಭಿನ್ನವಾಗಿ ಆಯೋಜಿಸಿದ್ದರು.

ಕೃಷಿ ಜಾಗೃತಿಗೆ ಸಾಥ್​ ನೀಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನಾಟಿ ಕಾರ್ಯಕ್ಕೆ ಪಂಚೆ-ಶಲ್ಯವನ್ನುಟ್ಟು ಚಾಲನೆ ನೀಡಿ ಬಳಿಕ ಸಸಿ ಮಡಿಗಳನ್ನು ಹಿಡಿದು ನಾಟಿ‌ ಕಾರ್ಯ ಕೂಡ ಮಾಡಿದರು. ಜಿಲ್ಲಾಧಿಕಾರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್ ಕೆ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ್ ನಿಶ್ಚಲ್ ನರೋನಾ ಸೇರಿದಂತೆ ಜಿಲ್ಲಾ ಕೇಂದ್ರದ ಪತ್ರಕರ್ತರೂ ಸಾಥ್ ನೀಡಿದರು. ಕೃಷಿ, ಗದ್ದೆ ಕಾರ್ಯವೆಂದರೆ ಮೂಗು ಮುರಿಯುವವರ ನಡುವೆ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಗದ್ದೆಗಿಳಿದು ನಾಟಿ ಕಾರ್ಯ ಮಾಡುವ‌ ಮೂಲಕ ಮಾದರಿಯಾದರು.

ಇನ್ನು, ಇದಕ್ಕೂ ಮೊದಲು ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ಟ್ಯಾಗೋರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಸಿದ್ದರದ ನರಸಿಂಹ ಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೆ ಪ್ರಸಕ್ತ ಸಾಲಿನ ರವೀಂದ್ರನಾಥ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಇದನ್ನೂ ಓದಿ : ಸಾಲುಮರದ ತಿಮ್ಮಕ್ಕ ಪಾರ್ಕ್​ನಲ್ಲಿ ಮೈ ಜುಂ ಎನಿಸುವ ಜಿಪ್‌ಲೈನ್.. ಆಟದಿಂದಲೇ ಉದ್ಯಾನವನಕ್ಕೆ ಆದಾಯ..

Last Updated : Aug 1, 2021, 7:09 PM IST

ABOUT THE AUTHOR

...view details