ಶಿರಸಿ:ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ವೃದ್ಧನೋರ್ವನ ಶವ ಪತ್ತೆಯಾಗಿರುವ ಘಟನೆ ಸಿದ್ದಾಪುರ ತಾಲೂಕಿನ ಕಾನಸೂರು ಸಸ್ಯಪಾಲನಾ ಕ್ಷೇತ್ರದ ಬಳಿ ನಡೆದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ - ವೃದ್ಧನೊರ್ವನ ಶವ ಪತ್ತೆ
ಶಿರಸಿ ಬಳಿಯ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತನ ಶವ ಪತ್ತೆಯಾಗಿದೆ.

ಅಪರಿಚಿತ ಶವ ಪತ್ತೆ
ಸುಮಾರು 65 ರಿಂದ 70 ವರ್ಷದ ಅಪರಿಚಿತ ವೃದ್ಧನ ಶವ ಇಲ್ಲಿ ಪತ್ತೆಯಾಗಿದೆ. 15 ದಿನಗಳ ಹಿಂದೆ ಕಾನಸೂರು ಬಳಿಯ ಸಸ್ಯಪಾಲನಾ ಕ್ಷೇತ್ರದ ಎದುರಿನ ಅರಣ್ಯದಲ್ಲಿ ನೇಣು ಬಿಗಿದು ಕೊಂಡು ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.