ಕರ್ನಾಟಕ

karnataka

ETV Bharat / state

ರೈಲಿನಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಯುವಕರ ಬಂಧನ - Bhatkal Railway Police arrest two thieves

ರೈಲಿನಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಯುವಕರನ್ನು ರೈಲ್ವೇ ಪೊಲೀಸರು ಬಂಧಿಸಿ, ಆರೋಪಿಗಳಿಂದ ಮೊಬೈಲ್ ಫೋನ್, ವಾಚ್, ಬ್ಯಾಗ್​ ಹಾಗೂ 23,700 ನಗದನ್ನು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಯುವಕರ ಬಂಧನ

By

Published : Nov 2, 2019, 6:50 PM IST

ಭಟ್ಕಳ: ಪ್ರಯಾಣಿಕರ ಸೋಗಿನಲ್ಲಿ ರೈಲಿನಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಯುವಕರನ್ನು ಭಟ್ಕಳ ರೈಲ್ವೇ ಪೊಲೀಸರು ಶುಕ್ರವಾರ ಬಂಧಿಸಿ ಆರೋಪಿಗಳಿಂದ ನಗದು ಹಾಗೂ ಮೊಬೈಲ್ ಪೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬ್ದುಲ್ ರಶೀದ್ (22) ಹಾಗೂ ಇಶಾಕ್(19)ಬಂಧಿತ ಆರೋಪಿಗಳು ಎಂದುತಿಳಿದು ಬಂದಿದೆ. ಇವರಿಂದ ಮೊಬೈಲ್ ಫೋನ್, ವಾಚ್, ಬ್ಯಾಗ್​ ಹಾಗೂ 23,700 ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಯುವಕರಿಬ್ಬರು ಕಳ್ಳತನ ಮಾಡಿ ಭಟ್ಕಳದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಹಾರಿ ಶಿರೂರು ಕಡೆಗೆ ಓಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಬೆನ್ನಟ್ಟಿದ ರೈಲ್ವೆ ಪೊಲೀಸರು, ಅಂಡರ್ ಬ್ರಿಡ್ಜ್​ ಅಡಿಯಲ್ಲಿ ಅಡಗಿ ಕುಳಿತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಇವರು ಬೈಂದೂರಿನಿಂದ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸಿ ಎಸಿ ಕೋಚ್​ಗೆ ತೆರಳಿ ಭಟ್ಕಳದಲ್ಲಿ ರೈಲು ನಿಲ್ಲಿಸಿದಾಗ ಕಳವು ನಡೆಸಿದ್ದರು. ರಶೀದ್ ತಾನು ಕದ್ದಿದ್ದ ವಸ್ತುಗಳನ್ನು ಇಶಾಕ್​ಗೆ ಹಸ್ತಾಂತರಿಸಿ ರೈಲು ಹೋಗುತ್ತಿದ್ದ ಹಾಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದೆ. ನಂತರ ಆರೋಪಿಗಳನ್ನು ಪೊಲೀಸರು ಪರಿಶೀಲಿಸಿದಾಗ ಬ್ಯಾಗ್ ದೊರೆತಿದ್ದು, ಬಳಿಕ ಬ್ಯಾಗ್ ಕಳೆದುಕೊಂಡಿದ್ದ ಸತ್ಯಭಾಮಾ ಮೆನನ್ ಅವರನ್ನ ಪೊಲೀಸರು ಸಂಪರ್ಕಿಸಿ ಅವರಿಗೆ ಬ್ಯಾಗ್​ ಹಸ್ತಾಂತರಿಸಿದ್ದಾರೆ.

ಬಂಧಿತ ಆರೋಪಿಗಳು ಅ.30 ರಂದು ಮಂಗಳೂರು ನಿಲ್ದಾಣದಲ್ಲಿ ಪ್ರಯಾಣಿಕರೋರ್ವರ ಸರವನ್ನು ಅಪಹರಿಸಿದ್ದು, ಆರೋಪಿಗಳ ವಿರುದ್ಧ ಈಗಾಗಲೇ ಶೋನೂರ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿವೆ ಎಂದು ತಿಳಿದು ಬಂದಿದೆ.

ABOUT THE AUTHOR

...view details