ಶಿರಸಿ :ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಹಂಚಳ್ಳಿ ಗ್ರಾಮದಲ್ಲಿನ ಅಘನಾಶಿನಿ ನದಿಯಲ್ಲಿ ಘಟನೆ ನಡೆದಿದೆ.
ಈಜಲು ತೆರಳಿದ್ದ ಇಬ್ಬರು ಯುವಕರು ಅಘನಾಶಿನಿ ನದಿ ನೀರುಪಾಲು - undefined
ಬೇಸಿಗೆ ರಜೆಯ ಕಾರಣ ನಾಲ್ವರು ಸ್ನೇಹಿತರು ಅಘನಾಶಿನಿ ನದಿಗೆ ಈಜಲು ತೆರಳಿದ್ದರು. ಈ ವೇಳೆ ಇಬ್ಬರು ಯುವಕರು ಈಜಲು ತೆರಳಿದಾಗ ಮುಳುಗಿ ಮೃತಪಟ್ಟಿದ್ದಾರೆ.
ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಸಿದ್ದಾಪುರದ ಚಂದನ್ ದಿನೇಶ್ ಹೆಗಡೆ (14) ಹಾಗೂ ವೆಂಕಟೇಶ್ ಗಜಾನನ ಹೆಗಡೆ (19) ನೀರುಪಾಲಾದ ಯುವಕರು ಎನ್ನಲಾಗಿದೆ. ಬೇಸಿಗೆ ರಜೆಯ ಕಾರಣ ನಾಲ್ವರು ಸ್ನೇಹಿತರು ಅಘನಾಶಿನಿ ನದಿಗೆ ಈಜಲು ತೆರಳಿದ್ದರು. ಇಬ್ಬರು ದಡದ ಮೇಲೆ ಕುಳಿತಿದ್ದು, ನೀರಿನಲ್ಲಿ ಆಳ ಹೆಚ್ಚಿಗಿದ್ದ ಪರಿಣಾಮ ಇಬ್ಬರು ಈಜಲು ತೆರಳಿದಾಗ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.