ಕರ್ನಾಟಕ

karnataka

ETV Bharat / state

ಏನೇ ಕೇಳಿದ್ರೂ ಥಟ್‌ ಅಂತ ಉತ್ತರ.. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದ ಪೋರಿ - ದಾಖಲೆ ಬರೆದ ಪೋರಿ

ಸಾಧಕರು, ವಸ್ತುಗಳು, ಪ್ರಾಣಿಗಳು.. ಹೀಗೆ ಹಲವು ಹೆಸರುಗಳನ್ನು ಫಟಾ ಫಟ್‌ ಅಂತ ಹೇಳುವ ಮೂಲಕ ಎರಡು ವರ್ಷ ವಯಸ್ಸಿನ ಪುಟಾಣಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿದ್ದಾಳೆ.

India Book of Record in Karwar
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್

By

Published : Jun 29, 2021, 7:58 AM IST

ಕಾರವಾರ: ಎರಡು ವರ್ಷದ ಪುಟಾಣಿಯೋರ್ವಳು ತನ್ನ ಬುದ್ಧಿಶಕ್ತಿ ಹಾಗೂ ಅಪಾರ ನೆನಪಿನ ಶಕ್ತಿಯಿಂದ ಸಾಧಕರು, ವಸ್ತುಗಳು, ಪ್ರಾಣಿಗಳು, ಶಬ್ದ.. ಹೀಗೆ ಹತ್ತಾರೂ ಬಗೆಯ ಹೆಸರುಗಳನ್ನು ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ತನ್ನ ಹೆಸರನ್ನು ಅಚ್ಚಾಗಿಸಿಕೊಂಡಿದ್ದಾಳೆ.

ಕಂಪನಿಗಳ ಲೋಗೋ ನೋಡಿ ಹೆಸರು ಹೇಳುತ್ತಿರುವ ದ್ಯುತಿ ವಿನೋದ ರಾವ್

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆರವಟ್ಟಾದ ವಿನೋದ ರಾವ್ ಮತ್ತು ರಂಜನಾ ದಂಪತಿಯ ಮಗಳಾದ ದ್ಯುತಿ ವಿನೋದ ರಾವ್ ಚಿಕ್ಕ ವಯಸ್ಸಿನಲ್ಲಿಯೇ ಇಂಥದ್ದೊಂದು ವಿನೂತನ ಸಾಧನೆ ಮಾಡಿದ್ದಾಳೆ.

ತನ್ನ ಬುದ್ಧಿಶಕ್ತಿ ಮತ್ತು ಅಪಾರ ನೆನಪಿನ ಶಕ್ತಿಯಿಂದಾಗಿ 35 ಪ್ರಾಣಿಗಳು, 15 ಪಕ್ಷಿಗಳು, 12 ರೀತಿಯ ಬಣ್ಣಗಳು, 30 ರೀತಿಯ ತಿಂಡಿ, 23 ಬಗೆಯ ತರಕಾರಿಗಳು, 20 ರೀತಿಯ ಹಣ್ಣುಗಳು, 17 ಹೂವುಗಳು,16 ವಾಹನಗಳು, 12 ರೀತಿಯ ಆಕೃತಿಗಳು, 20 ಜನ ರಾಜಕಾರಣಿಗಳು, 13 ಜನ ಸ್ವಾತಂತ್ರ್ಯ ಹೋರಾಟಗಾರರು, 18 ಜಾತಿಯ ಕೀಟಗಳು, 15 ಜನ ಕ್ರಿಕೆಟರ್​​ಗಳು, 35 ಜನ ಸೆಲೆಬ್ರೆಟಿಗಳು, 8 ಜನ ಮಹಿಳಾ ಸಾಧಕರು, 29 ರಾಜ್ಯಗಳು, 20 ಜಾತಿಯ ನಾಯಿಗಳು, 1 ರಿಂದ 20 ರವರೆಗಿನ ಹಿಂದಿ ಸಂಖ್ಯೆಗಳು, 1 ರಿಂದ 10 ರ ವರೆಗಿನ ಆಂಗ್ಲ ಸಂಖ್ಯೆಗಳು, 1 ರಿಂದ 10 ರ ವರೆಗಿನ ಕನ್ನಡ ಸಂಖ್ಯೆಗಳು, ABCD A ಯಿಂದ Z ವರೆಗೆ, 2 ಇಂಗ್ಲಿಷ್​ ರೈಮ್ಸ್ , 2 ಭಗವದ್ಗೀತೆಯ ಶ್ಲೋಕಗಳು, 12 ತಿಂಗಳುಗಳು, ವಾರದ 7 ದಿನಗಳು ಹಾಗೂ ವಿವಿಧ ಅಂತರಾಷ್ಟ್ರೀಯ 280 ಕ್ಕೂ ಹೆಚ್ಚಿನ ಕಂಪನಿಗಳ ಲೋಗೊಗಳನ್ನು ಗುರುತಿಸುತ್ತಾಳೆ.

ಇದನ್ನೂಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌​ನಲ್ಲಿ ಹೆಸರು ದಾಖಲಿಸಿದ್ದಾನೆ 3 ವರುಷದ ಈ ಪೋರ!!

ಇದೀಗ ದ್ಯುತಿ ವಿನೋದ ರಾವ್ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಗೆ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ದೊರೆತಿದೆ.

ABOUT THE AUTHOR

...view details