ಕರ್ನಾಟಕ

karnataka

ETV Bharat / state

ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಒಂದೇ ತಾಯಿಯ ಇಬ್ಬರು ಮಕ್ಕಳಿಗೆ ಸ್ವಗ್ರಾಮದಲ್ಲಿ ಸನ್ಮಾನ - ಯೋಧರಿಗೆ ಸನ್ಮಾನ

ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಒಂದೇ ತಾಯಿಯ ಮಕ್ಕಳಾದ ಇಬ್ಬರು ಯೋಧರನ್ನು  ಅವರ ಸ್ವಗ್ರಾಮ ಶಿರಸಿ ತಾಲೂಕಿನ ಕೆಂಚಗದ್ದೆಯಲ್ಲಿ ಸನ್ಮಾನಿಸಲಾಗಿದೆ. ಶ್ರೀನಿವಾಸ ನಾಯ್ಕ ಹಾಗೂ ಧನಂಜಯ ನಾಯ್ಕ ಸೇನೆಯಲ್ಲಿರುವ ಯೋಧರು.

http://10.10.50.85:6060/reg-lowres/15-January-2020/kn-srs-02-yodharige-sammana-vis-ka10005_15012020192405_1501f_1579096445_728.mp4
ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಒಂದೇ ತಾಯಿಯ ಇಬ್ಬರು ಮಕ್ಕಳಿಗೆ ಸ್ವಗ್ರಾಮದಲ್ಲಿ ಸನ್ಮಾನ

By

Published : Jan 15, 2020, 10:33 PM IST

ಶಿರಸಿ:ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಒಂದೇ ತಾಯಿಯ ಮಕ್ಕಳಾದ ಇಬ್ಬರು ಯೋಧರನ್ನು ಅವರ ಸ್ವಗ್ರಾಮ ಶಿರಸಿ ತಾಲೂಕಿನ ಕೆಂಚಗದ್ದೆಯ ಸನ್ಮಾನಿಸಿ ಗೌರವಿಸಲಾಗಿದೆ.

ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಒಂದೇ ತಾಯಿಯ ಇಬ್ಬರು ಮಕ್ಕಳಿಗೆ ಸ್ವಗ್ರಾಮದಲ್ಲಿ ಸನ್ಮಾನ

ಕೆಂಚಗದ್ದೆಯ ಸೊಸೈಟಿ ಕಾಲೋನಿಯ ನಾರಾಯಣ ನಾಯ್ಕ ಮತ್ತು ಜಾನಕಿ ನಾಯ್ಕ ದಂಪತಿಗಳ ಮಕ್ಕಳಾಗಿರುವ ಶ್ರೀನಿವಾಸ ನಾಯ್ಕ ಹಾಗೂ ಧನಂಜಯ ನಾಯ್ಕ ಅವರನ್ನು ಕೆಂಚಗದ್ದೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರ ದೇಶ ಸೇವೆಯನ್ನು ಮೆಚ್ಚಿ ಊರಿನ ನಾಗರಿಕರು ಸನ್ಮಾನಿಸಿದರು. ತಮ್ಮ ಧನಂಜಯ ನಾಯ್ಕ ನಾಸಿಕ್​ನಲ್ಲಿರುವ ಟ್ರೇನಿಂಗ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದು, ಅಣ್ಣ ಶ್ರೀನಿವಾಸ ನಾಯ್ಕ ಹೈದರಾಬಾದ್​ನಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್​ಎಎಫ್) ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಯೋಧರನ್ನು ಜನತಾಕಾಲೋನಿ ಯುವಕರು ಸಾಂಪ್ರದಾಯಿಕ ಡೊಳ್ಳು ಕುಣಿತದ ಮುಖಾಂತರ ಅದ್ದೂರಿಯಾಗಿ ಬರಮಾಡಿಕೊಂಡರು.

ABOUT THE AUTHOR

...view details