ಕಾರವಾರ:ಕಳೆದ ಕೆಲ ದಿನಗಳಿಂದ ನಗರದ ವಿವಿಧೆಡೆ ಹೆಬ್ಬಾವುಗಳು ಪ್ರತ್ಯಕ್ಷವಾಗತೊಡಗಿದ್ದು, ಇಂದು ಮತ್ತೆ ನಗರದ ಬಿಎಸ್ಎನ್ಎಲ್ ನೌಕರರ ವಸತಿ ಗೃಹದ ಪ್ರದೇಶದ ಬಳಿ ಎರಡು ಹೆಬ್ಬಾವುಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ.
ಕಾರವಾರದಲ್ಲಿ ಜೋಡಿ ಹೆಬ್ಬಾವು ಪ್ರತ್ಯಕ್ಷ ; ಒಂದು ಸೆರೆ ಇನ್ನೊಂದು ಪರಾರಿ! - ಕಾರವಾರ ಹೆಬ್ಬಾವು ಸುದ್ದಿ
ಕಾರವಾರ ನಗರದಲ್ಲಿ ಕಳೆದ ಕೆಲ ದಿನಗಳಿಂದ ಐದು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ.
ಹೌದು, ನಗರದ ಸೋನಾರವಾಡದ ಬಳಿ ಇರುವ ವಸತಿ ಗೃಹಗಳ ಸಮೀಪ ಇಂದು ಎರಡು ಬೃಹತ್ ಗಾತ್ರದ ಹೆಬ್ಬಾವುಗಳು ಪ್ರತ್ಯಕ್ಷವಾಗಿದ್ದು, ಇದನ್ನು ತಿಳಿದ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದರು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಉರಗ ಪ್ರೇಮಿ ರವಿ ಗೌಡ ಅವರ ನೆರವಿನೊಂದಿಗೆ 12 ಅಡಿ ಉದ್ದದ ಒಂದು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಇನ್ನೊಂದು ಹೆಬ್ಬಾವು ನಾಪತ್ತೆಯಾಗಿದ್ದು, ಇದೀಗ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕಾರವಾರ ನಗರದಲ್ಲಿ ಕಳೆದ ಕೆಲ ದಿನಗಳಿಂದ ಐದು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ. ಇಷ್ಟಾದರೂ ಮತ್ತೆ ಮತ್ತೆ ಹಾವುಗಳು ಕಾಣಿಕೊಳ್ಳುತ್ತಿವೆ.