ಕರ್ನಾಟಕ

karnataka

ETV Bharat / state

ಬೈಕ್- ಲಾರಿ ನಡುವೆ ಭೀಕರ ಅಪಘಾತ: ಬೈಕ್​ ಸವಾರರಿಬ್ಬರ ದೇಹ ಛಿದ್ರ ಛಿದ್ರ - Two people death by accident in Karawara

ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬೊಗ್ರಿಬೈಲ್ ಗ್ರಾಮದ ಬಳಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಬೊಮ್ಮಯ್ಯ ನಾಯಕ(70), ನಾರಾಯಣ ನಾಯಕ(50)
ಬೊಮ್ಮಯ್ಯ ನಾಯಕ(70), ನಾರಾಯಣ ನಾಯಕ(50)

By

Published : Jun 1, 2022, 7:03 PM IST

ಕಾರವಾರ: ಚಲಿಸುತ್ತಿದ್ದ ಬೈಕ್​ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬೊಗ್ರಿಬೈಲ್ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಬೊಮ್ಮಯ್ಯ ನಾಯಕ(70), ನಾರಾಯಣ ನಾಯಕ(50) ಮೃತರು.

ಬೈಕ್- ಲಾರಿ ಅಪಘಾತ ನಡೆದ ಸ್ಥಳ

ಬೈಕ್ ಸವಾರರು ಬೊಗ್ರಿಬೈಲ್ ಗ್ರಾಮದಿಂದ ಅಂಕೋಲಾದತ್ತ ಆಗಮಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಅತಿವೇಗವಾಗಿ ಆಗಮಿಸಿದ ಲಾರಿಯೊಂದು ಏಕಾಏಕಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಬ್ಬರೂ ರಸ್ತೆಯ ಮೇಲೆ ಬಿದ್ದಿದ್ದಾರೆ. ಆಗ ಇಬ್ಬರ ಮೇಲೂ ಲಾರಿ ಹರಿದಿದೆ.

ಅದರಲ್ಲಿ ಓರ್ವ ಲಾರಿಯ ಚಕ್ರಕ್ಕೆ ಸಿಲುಕಿದ್ದು, ಅನತಿ ದೂರ ಎಳೆದುಕೊಂಡು ಹೋದ ಪರಿಣಾಮ ದೇಹ ಸಂಪೂರ್ಣ ಛಿದ್ರವಾಗಿದೆ. ಹೀಗಾಗಿ, ಮೃತ ದೇಹವನ್ನು ಬಟ್ಟೆಯಲ್ಲಿ ಕಟ್ಟಿ ಕೊಂಡೊಯ್ಯುವಂತಾಯಿತು. ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಓದಿ:ಕುವೆಂಪುಗೆ ಅವಮಾನ ಆರೋಪ: ಸಚಿವ ಬಿ ಸಿ ನಾಗೇಶ್ ಮನೆ ಎದುರು ಪ್ರತಿಭಟನೆ

ABOUT THE AUTHOR

...view details