ಕಾರವಾರ: ಹಳೆಯ ಮನೆ ಗೋಡೆ ತೆರವುಗೊಳಿಸುವಾಗ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ನಡೆದಿದೆ. ಭಾವಿಕೇರಿ ನಿವಾಸಿ ಮಧುಕರ ನಾಯಕ (58) ಹಾಗೂ ಶಾಂತಾರಾಮ ನಾಯಕ (58) ಮೃತರು.
ಕಾರವಾರ: ಮನೆ ಗೋಡೆ ಕುಸಿದು ಇಬ್ಬರು ಸಾವು - ಕಾರವಾರ
ಅಂಕೋಲಾ ತಾಲೂಕಿನ ಭಾವಿಕೇರಿ ಬಳಿ ಮನೆಯೊಂದರ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ.
ಸಾಂಕೇತಿಕ ಚಿತ್ರ
ಮಧುಕರ ನಾಯಕ ಅವರ ಹಳೆಯ ಮನೆಯ ಗೋಡೆ ತೆರವುಗೊಳಿಸಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗೋಡೆ ಕುಸಿದು ಬಿದ್ದಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಪ್ರತ್ಯೇಕವಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಓರ್ವ ಕುಮಟಾ ಮಿರ್ಜಾನ್ ಬಳಿ, ಇನ್ನೋರ್ವ ಕುಂದಾಪುರದ ಬೈಂದೂರು ಬಳಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಚನ್ನಗಿರಿಯಲ್ಲಿ ಮನೆ ಗೋಡೆ ಕುಸಿದು ತಾಯಿ-ಮಗು ದಾರುಣ ಸಾವು