ಕರ್ನಾಟಕ

karnataka

ETV Bharat / state

ಭೀಕರ ಅಪಘಾತ: ಊಟ ಬಿಟ್ಟು ಗಾಯಾಳುವಿನ ನೆರವಿಗೆ ಬಂದ ವೈದ್ಯ ದಂಪತಿ - accident in karawar

ಶನಿವಾರ ಮಧ್ಯಾಹ್ನ ನಿಪ್ಪಾಣಿ ಬಳಿ ಟ್ಯಾಂಕರ್​ಗಳ ನಡುವೆ ಭೀಕರ ಅಪಘಾತ ನಡೆದಿದೆ. ವೈದ್ಯ ದಂಪತಿ ಗಾಯಾಳುಗಳಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದಿದ್ದಾರೆ.

two injured due to accident in karawara
ಭೀಕರ ಅಪಘಾತ

By

Published : Aug 28, 2022, 5:01 PM IST

ಕಾರವಾರ/ಬೆಳಗಾವಿ: ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಪ್ಪಾಣಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದವರಿಗೆ ಸಹಾಯ ಮಾಡಿ ಶಿರಸಿ ಮೂಲದ ವೈದ್ಯ ದಂಪತಿ ಮಾನವೀಯತೆ ಮೆರೆದಿದ್ದಾರೆ.

ಶನಿವಾರ ಮಧ್ಯಾಹ್ನ ನಿಪ್ಪಾಣಿ ಬಳಿ ಟ್ಯಾಂಕರ್​ಗಳ ನಡುವೆ ಭೀಕರ ಅಪಘಾತ ನಡೆದಿದೆ. ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದರು. ಇದೇ ವೇಳೆ ಅಲ್ಲೇ ಸಮೀಪದ ಹೋಟೆಲ್​ ಒಂದರಲ್ಲಿ ಶಿರಸಿ ಮೂಲದ ವೈದ್ಯ ದಂಪತಿಗಳಾಗಿರುವ ಡಾ.ದಿನೇಶ ಹೆಗಡೆ ಮತ್ತು ಡಾ.ಸುಮನ್ ಹೆಗಡೆ ಊಟ ಮಾಡುತ್ತಿದ್ದರು. ಕಣ್ಣೆದುರಲ್ಲೇ ನಡೆದ ಅಪಘಾತ ನೋಡಿ ಊಟವನ್ನು ಅರ್ಧಕ್ಕೆ ನಿಲ್ಲಿಸಿ ಸ್ಥಳಕ್ಕೆ ತೆರಳಿದ ದಂಪತಿ ಗಾಯಾಳುಗಳಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದಿದ್ದಾರೆ. ನಂತರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಭೀಕರ ಅಪಘಾತ

ಇದನ್ನೂ ಓದಿ:ತುಮಕೂರು: ನೀರಿನ ರಭಸಕ್ಕೆ ಬೈಕ್​ ಸಮೇತ ಕೊಚ್ಚಿಕೊಂಡು ಹೋದ ಯುವಕ

ಈ ವೈದ್ಯ ದಂಪತಿಯ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೋಟರಿ ಸಂಸ್ಥೆ ಮೂಲಕ ಮತ್ತು ವೈಯಕ್ತಿಕವಾಗಿ ತಮ್ಮ ಸಾಮಾಜಿಕ ಕಾರ್ಯದ ಮೂಲಕ ಜಿಲ್ಲೆಯಲ್ಲಿ ಡಾ.ದಿನೇಶ್ ಹೆಗಡೆ ಹಾಗು ಡಾ.ಸುಮನ್ ಹೆಗಡೆ ಹೆಸರು ಮಾಡಿದ್ದಾರೆ.

ABOUT THE AUTHOR

...view details