ಕಾರವಾರ:ಉದ್ಯಮಿಗೆ ಬ್ಲಾಕ್ಮೇಲ್ ಮಾಡಿ 50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕರ್ಕಿ ಕೋಡಿಯ ಪರಮೇಶ್ವರ ಮುಕುಂದ ಉಪ್ಪಾರ ಹಾಗೂ ಉದ್ಯಮನಗರದ ಸುನೀಲ್ ಬಾಬು ಮೇಸ್ತ ಎಂದು ಗುರುತಿಸಲಾಗಿದೆ.
ಆರೋಪಿಗಳು ಸ್ಥಳೀಯ ಉದ್ಯಮಿಯ ವೈಯಕ್ತಿಕ ವಿಷಯ ಬಳಸಿಕೊಂಡು ಲಕ್ಷಾಂತರ ರೂ. ಹಣ ನೀಡುವಂತೆ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದರು. ಅಲ್ಲದೆ, ತಮ್ಮ ಗುರುತು ಮರೆಮಾಚುತ್ತಿದ್ದರು. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಫೋನ್ ಕರೆಗಳ ಆಧರಿಸಿ ಪೊಲೀಸರನ್ನು ಬಂಧಿಸಿದ್ದಾರೆ.