ಭಟ್ಕಳ:ತಾಲೂಕಿನ ತಲಾಂದ ಗುಡ್ಡದ ಮೇಲೆ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು ಘಟನೆ ನಡೆದ 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಸಾಗರದ ಕಟ್ಟಿನಕಾರ ನಿವಾಸಿ ನಾಗಪ್ಪ ನಾಯ್ಕ ಹಾಗೂ ತಲಾಂದ ನಿವಾಸಿ ಮಾಸ್ತಪ್ಪ ನಾಯ್ಕ ಎಂದು ಗುರುತಿಸಲಾಗಿದೆ.
ಭಟ್ಕಳದಲ್ಲಿ ಮಹಿಳೆಯ ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿಗಳ ಬಂಧನ - woman murder case 2022
ಪ್ರಕರಣ ದಾಖಲಾಗಿ ಒಂದು ದಿನದೊಳಗೆ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆದ್ರೆ, ಮಹಿಳೆಯ ಗುರುತು ಪರಿಚಯ ದೊರೆತಿಲ್ಲ.
![ಭಟ್ಕಳದಲ್ಲಿ ಮಹಿಳೆಯ ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿಗಳ ಬಂಧನ Arrest of two accused in murder of woman](https://etvbharatimages.akamaized.net/etvbharat/prod-images/768-512-15396685-221-15396685-1653618504591.jpg)
ಬಂಧಿತ ಆರೋಪಿಗಳು
ಘಟನೆಯ ವಿವರ:ಮೇ.21ರಂದು ರಾತ್ರಿ ಮಾಸ್ತಪ್ಪ ನಾಯ್ಕ ಮನೆಗೆ ಆತನ ಅಣ್ಣನ ಮಗ ನಾಗಪ್ಪ ನಾಯ್ಕ ಬಾಡಿಗೆ ರಿಕ್ಷಾ ಒಂದರಲ್ಲಿ ಓರ್ವ ಮಹಿಳೆಯನ್ನು ಕರೆದುಕೊಂಡು ಬಂದಿದ್ದ. ಯಾವುದೋ ಉದ್ದೇಶಕ್ಕೆ ರಾತ್ರಿ ಆಕೆಯನ್ನು ಕೊಲೆ ಮಾಡಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಇಬ್ಬರೂ ಸೇರಿ ಶವವನ್ನು ಹತ್ತಿರದ ಮಣ್ಣಿನ ಗುಡ್ಡದ ಮೇಲೆ ಎಸೆದಿದ್ದರು.
ಗ್ರಾಮದ ಕೊಲ್ಲಿಮುಲ್ಲೆ ನಿವಾಸಿ ಗಣಪತಿ ನಾಯ್ಕ ಎನ್ನುವವರು ಮೇ.24ರಂದು ಬೆಳಗ್ಗೆ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದನ್ನು ಗಮನಿಸಿ, ಗ್ರಾಮೀಣ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿದ್ದಾರೆ.