ಕಾರವಾರ: ಖಾಸಗಿ ಸುದ್ದಿ ಸಂಸ್ಥೆಯ ಹೆಸರು ಹೇಳಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ ನಿವಾಸಿ ಸಮಂತ್ ಹಾಗೂ ಜಯನಗರ 6ನೇ ಬ್ಲಾಕ್ ನಿವಾಸಿ ವಿಜಯ ಬಂಧಿತರು.
ಖಾಸಗಿ ಸುದ್ದಿವಾಹಿನಿ ಹೆಸರು ಬಳಸಿ ಹಣ ವಸೂಲಿ ಯತ್ನ; ಕಾರವಾರದಲ್ಲಿ ಇಬ್ಬರ ಬಂಧನ - ಸುದ್ದಿವಾಹಿನಿ ಹೆಸರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟ ಇಬ್ಬರನ್ನು ಬಂಧಿಸಿದ ಪೊಲೀಸರು
ಸುದ್ದಿವಾಹಿನಿ ಹೆಸರಲ್ಲಿ ಇಂಜಿನಿಯರ್ ಒಬ್ಬರಿಗೆ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟ ಇಬ್ಬರು ಆರೋಪಿಗಳನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಸುದ್ದಿವಾಹಿನಿ ಹೆಸರು ಹೇಳಿ ವಸೂಲಿಗೆ ಯತ್ನ; ಇಬ್ಬರ ಬಂಧನ
ಪಿಡಬ್ಲ್ಯುಡಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ದೇವಿದಾಸ್ ಚೌವ್ವಾಣ್‌ಗೆ ಕಳೆದ 6 ದಿನಗಳಿಂದ ಕರೆ ಮಾಡುತ್ತಿದ್ದ ಆರೋಪಿಗಳು, ತಾವು ಮಾಧ್ಯಮದವರು, ನೀವು ಬೇನಾಮಿ ಆಸ್ತಿ ಮಾಡಿದ್ದೀರಿ. ನಿಮ್ಮ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಹಾಕಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ಸುದ್ದಿ ಹಾಕದೇ ಇರಲು 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪೊಲೀಸರಿಗೆ ದೇವಿದಾಸ್ ಚೌವ್ವಾಣ್ ದೂರು ನೀಡಿದ್ದರು.
ಇದನ್ನೂ ಓದಿ:ಸುಳ್ಳು ಸಾಕ್ಷ್ಯ ಸೃಷ್ಟಿ: ಮತ್ತೆ ಬಂಧನಕ್ಕೊಳಗಾದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್