ಕರ್ನಾಟಕ

karnataka

ETV Bharat / state

ಕಾರವಾರ: ಆಲಿವ್ ರೈಡ್ಲೆ ಕಡಲಾಮೆಯ 113 ಮೊಟ್ಟೆಗಳ ರಕ್ಷಣೆ - ಕಾರವಾರದಲ್ಲಿ ಆಲಿವ್ ರೈಡ್ಲೆ ಕಡಲಾಮೆಯ 113 ಮೊಟ್ಟೆಗಳ ರಕ್ಷಣೆ

ಕಡಲತೀರದಲ್ಲಿ ಮರಳಿನಡಿ ಹಾಕಿದ್ದ ಮೊಟ್ಟೆಯನ್ನು ಕೊನೆಗೆ ಹೊರತೆಗೆದಾಗ ಒಟ್ಟು 113 ಮೊಟ್ಟೆಗಳು ದೊರೆತಿದ್ದು, ಅದನ್ನು ಸಂರಕ್ಷಣೆ ಮಾಡಲಾಯಿತು.

turtles-113-eggs-protected-in-karawara
ಆಲಿವ್ ರೈಡ್ಲೆ ಕಡಲಾಮೆಯ 113 ಮೊಟ್ಟೆಗಳ ರಕ್ಷಣೆ

By

Published : Jan 30, 2022, 9:32 PM IST

Updated : Jan 30, 2022, 9:48 PM IST

ಕಾರವಾರ: ತಾಲೂಕಿನ ದೇವಭಾಗ ಕಡಲತೀರದಲ್ಲಿ ಮೊಟ್ಟೆ ಇಟ್ಟಿದ್ದ ಆಲಿವ್ ರೈಡ್ಲೆ ಕಡಲಾಮೆಯ 113 ಮೊಟ್ಟೆಗಳನ್ನು ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ದೇವಭಾಗ ಕಡಲತೀರದಲ್ಲಿ ಆಲಿವ್ ರೈಡ್ಲೆ ಕಡಲಾಮೆಯೂ ಮೊಟ್ಟೆ ಇಟ್ಟಿರುವುದನ್ನು ತಿಳಿದ ಸ್ಥಳೀಯ ಮೀನುಗಾರ ಬಾಲಕೃಷ್ಣ ಸೈಲ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ತೆರಳಿದ ಕಾರವಾರ ವಿಭಾಗದ ಉಪ ಅರಣ್ಯ ರಕ್ಷಣಾಧಿಕಾರಿ ಮಾರಿಯಾ ಕ್ರಿಸ್ಟರಾಜ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಸೇರಿದಂತೆ ಇತರೆ ಅಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಆಲಿವ್ ರೈಡ್ಲೆ ಕಡಲಾಮೆಯ 113 ಮೊಟ್ಟೆಗಳ ರಕ್ಷಣೆ

ಕಡಲತೀರದಲ್ಲಿ ಮರಳಿನಡಿ ಹಾಕಿದ್ದ ಮೊಟ್ಟೆಯನ್ನು ಕೊನೆಗೆ ಹೊರತೆಗೆದಾಗ ಒಟ್ಟು 113 ಮೊಟ್ಟೆಗಳು ದೊರೆತಿದ್ದು, ಅದನ್ನು ಸಂಣರಕ್ಷಣೆ ಮಾಡಲಾಯಿತು. ಇನ್ನು ಈ ಬಗ್ಗೆ ಸ್ಥಳೀಯ ಮೀನುಗಾರರಿಗೆ ಮಾಹಿತಿ ನೀಡಿದ ಅಧಿಕಾರಿಗಳು ಕಡಲಾಮೆಗಳ ಮೊಟ್ಟೆಗಳನ್ನು ನಾಯಿಸಿ ಸೇರಿದಂತೆ ಇತರೆ ಪ್ರಾಣಿಗಳು ತಿನ್ನುವ ಕಾರಣ ಅವುಗಳು ಕಂಡಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೇ ಅವುಗಳನ್ನು ಸಂರಕ್ಷಣೆ ಮಾಡಿ ಮರಿ ಮಾಡಿದ ಬಳಿಕ ಪುನಃ ಆಮೆ ಮರಿಗಳನ್ನು ಕಡಲಿಗೆ ಬಿಡಲಾಗುತ್ತದೆ.

ಕಡಲಾಮೆಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಕಡಲಾಮೆ ಮೊಟ್ಟೆ ಇಟ್ಟ ಮಾಹಿತಿ ನೀಡಿದ ಬಾಲಕೃಷ್ಣ ಶೈಲ್ ಅವರಿಗೆ ಗೌರವಧನ ನೀಡಲಾಯಿತು.

ಓದಿ:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 30, 2022, 9:48 PM IST

ABOUT THE AUTHOR

...view details