ಭಟ್ಕಳ: ಅಕ್ರಮವಾಗಿ ಎತ್ತುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಭಾನುವಾರ ಇಲ್ಲಿನ ಬಂದರ್ ರೋಡ್ 6ನೇ ಕ್ರಾಸ್ ಸಮೀಪ ವಶಕ್ಕೆ ಪಡೆದುಕೊಂಡಿದ್ದಾರೆ.
ಭಟ್ಕಳ: ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಎತ್ತುಗಳ ಅಕ್ರಮ ಸಾಗಾಟ; ಪೊಲೀಸರಿಂದ ರಕ್ಷಣೆ - Trafficking oxen illegally in Bhatkal news
ಇಚರ್ ವಾಹನದಲ್ಲಿ 6 ಲಕ್ಷಕ್ಕೂ ಅಧಿಕ ಮೌಲ್ಯದ 9 ದೊಡ್ಡ ಎತ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವೊಂದನ್ನು ಭಟ್ಕಳ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದರು.
ಭಟ್ಕಳದಲ್ಲಿ ಅಕ್ರಮವಾಗಿ ಬ್ರಹತ್ ಆಕಾರದ 9 ಎತ್ತುಗಳ ಸಾಗಾಟ
ಆರೋಪಿಗಳಾದ ಮೋಹಿದ್ದೀನ್ ಪಾತೀಮಿ, ಹನೀಫ್ ಹಾಗೂ ವಾಹನ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಇವರು ಇಚರ್ ವಾಹನದಲ್ಲಿ 6 ಲಕ್ಷಕ್ಕೂ ಅಧಿಕ ಮೌಲ್ಯದ 9 ದೊಡ್ಡ ದೊಡ್ಡ ಎತ್ತುಗಳನ್ನು ಪಾಸ್, ಪರವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಭಟ್ಕಳ ನಗರ ಠಾಣೆ ಪೊಲೀಸರು ಬಂದರ್ ರೋಡ್ 6 ನೇ ಕ್ರಾಸ್ ಸಮೀಪ ದಾಳಿ ಮಾಡಿ ವಾಹನ ಸಮೇತ 9 ಎತ್ತುಗಳನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.