ಕಾರವಾರ: ಪರವಾನಗಿ ಇಲ್ಲದೇ ಅಕ್ರಮವಾಗಿ ಲಾರಿ ಮೂಲಕ ಸಾಗಣೆ ಮಾಡುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿ ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ಯಲ್ಲಾಪುರ ಪಟ್ಟಣದ ಜೋಡುಕೆರೆ ಬಳಿ ನಡೆದಿದೆ.
ಅಕ್ರಮ ಗೋವುಗಳ ಸಾಗಾಟ... ಯಲ್ಲಾಪುರದಲ್ಲಿ ಐದು ಮಂದಿ ಅಂದರ್ ! - ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋವುಗಳ ಸಾಗಾಟ
ರಾಣೆಬೆನ್ನೂರಿನಿಂದ ಅಕ್ರಮವಾಗಿ ಮಂಗಳೂರು ಕಡೆಗೆ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
![ಅಕ್ರಮ ಗೋವುಗಳ ಸಾಗಾಟ... ಯಲ್ಲಾಪುರದಲ್ಲಿ ಐದು ಮಂದಿ ಅಂದರ್ ! Trafficking of Cow illegally Arrest of five accused in Karwar](https://etvbharatimages.akamaized.net/etvbharat/prod-images/768-512-9412706-371-9412706-1604385943138.jpg)
ಮಂಗಳೂರು ಮೂಲದ ಸಾದಿಕ್ ಇದಿನಬ್ಬಾ, ಮಹಮ್ಮದ್ ಹುಸೇನ್ ಮೊವಾರಿ ಅಬ್ಬಾ, ಬಾತೀಶ ಅಬ್ದುಲ್ ರಜಾಕ್, ಮಹಮ್ಮದ್ ಅರಪಾತ್ ಅಬ್ದುಲ್ ಖಾದರ್ ಹಾಗೂ ಮಹಮ್ಮದ್ ಹನೀಫ್ ಗುಡೆಮನೆ ಖಾದರಸಾಬ್ ಎಂಬುವವರನ್ನು ಬಂಧಿಸಲಾಗಿದೆ.
ಮಾಂಸಕ್ಕಾಗಿ ರಾಣೆಬೆನ್ನೂರಿನಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಏಳು ಎತ್ತುಗಳು ಹಾಗೂ ಎರಡು ಎಮ್ಮೆಗಳನ್ನು ಲಾರಿಯಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ತೆರಳುತ್ತಿದ್ದರು. ಪಟ್ಟಣದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಪರಿಶೀಲಿಸಿದಾಗ ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದ್ದು, ಒಂದು ಎತ್ತು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕಾರಣ ಉಸಿರುಗಟ್ಟಿ ಅಸುನೀಗಿದೆ. ತಕ್ಷಣ ಉಳಿದ ಹಸುಗಳನ್ನು ರಕ್ಷಣೆ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.