ಭಟ್ಕಳ: ಅಕ್ರಮವಾಗಿ ಇನೋವಾ ಕಾರಿನಲ್ಲಿ ಜಾನುವಾರು ಸಾಗಾಟ ಮಾಡುವ ವೇಳೆ ಮುರುಡೇಶ್ವರದ ಬಸ್ತಿ ಬಳಿ ಪೊಲೀಸರು ವಾಹನ ಸಮೇತ ಜಾನುವಾರು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಭಟ್ಕಳದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ: ಆರೋಪಿಗಳು ಪರಾರಿ - Trafficking in cattle illegally
ವಧೆ ಮಾಡುವ ಉದ್ದೇಶದಿಂದ ಮಂಕಿ ಕಡೆಯಿಂದ ಮುರುಡೇಶ್ವರ ಬಸ್ತಿಯ ಕಡೆ ಹಿಂಸಾತ್ಮಕವಾಗಿ ಯಾವುದೇ ದಾಖಲೆ ಇಲ್ಲದೆ ಸುಮಾರು 30 ಸಾವಿರ ಮೌಲ್ಯದ 3 ಹೋರಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ಶಬ್ಬೀರ್ ಅಬ್ದುಲ್ ಶೇಖ್, ಶಮೀರ್ ಶಂಸುದ್ದಿನ್ ಶಾಬ್ ಆರೋಪಿಗಳೆಂದು ತಿಳಿದುಬಂದಿದೆ. ಇನ್ನಿಬ್ಬರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಆರೋಪಿಗಳು ಇನೋವಾ ವಾಹನದಲ್ಲಿ ವಧೆ ಮಾಡುವ ಉದ್ದೇಶದಿಂದ ಮಂಕಿ ಕಡೆಯಿಂದ ಮುರುಡೇಶ್ವರ ಬಸ್ತಿಯ ಕಡೆ ಹಿಂಸಾತ್ಮಕವಾಗಿ ಯಾವುದೇ ದಾಖಲೆ ಇಲ್ಲದೆ ಸುಮಾರು 30 ಸಾವಿರ ಮೌಲ್ಯದ 3 ಹೋರಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಈ ವೇಳೆ ಮುರುಡೇಶ್ವರ ಠಾಣೆ ಪೊಲೀಸರು ಬಸ್ತಿ ಸಮೀಪ ವಾಹನ ಅಡ್ಡಗಟ್ಟಿದ್ದು, ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ವಾಹನ ಸಮೇತ ಜಾನುವಾರುಗಳನ್ನು ಮುರುಡೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದು, ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.