ಕಾರವಾರ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ವಾಹನ ಸಹಿತ ಜಪ್ತಿ ಮಾಡಿ, ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ನಗರದ ಗೀತಾಂಜಲಿ ಟಾಕೀಸ್ ಎದುರಿನ ರಸ್ತೆಯಲ್ಲಿ ನಡೆದಿದೆ.
ಕಾರವಾರ: ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ, ಓರ್ವನ ಬಂಧನ - ಕಾರವಾರ
ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ಕಾರವಾರ ವೃತ್ತ ನಿರೀಕ್ಷಕ ಸಂತೋಷ ಶೆಟ್ಟಿ ನೇತೃತ್ವದ ತಂಡ ಜಪ್ತಿ ಮಾಡಿ, ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಶಿರವಾಡದ ದಿಲೀಪ್ ನಾಯ್ಕ ಬಂಧಿತ ಆರೋಪಿ. ಈತ ಕಾರಿನಲ್ಲಿ ಗೋವಾ ರಾಜ್ಯದಿಂದ ಅನಧಿಕೃತವಾಗಿ ಸುಮಾರು 9,545 ರೂ. ಮೌಲ್ಯದ 67 ಲೀಟರ್ ಅಕ್ರಮ ಗೋವಾ ಸಾರಾಯಿ ಸಾಗಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾರವಾರ ವೃತ್ತ ನಿರೀಕ್ಷಕ ಸಂತೋಷ ಶೆಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕಾರಿನಲ್ಲಿದ್ದ ಗೋವಾ ಮದ್ಯ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಆರೋಪಿ ದಿಲೀಪ ನಾಯ್ಕ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷಕುಮಾರ ಎಂ., ಗ್ರಾಮೀಣ ಠಾಣೆಯ ಪಿಎಸೈ ರೇವಣಸಿದ್ದಪ್ಪ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.