ಕಾರವಾರ: ನವರಾತ್ರಿ ಹಬ್ಬ ಎಂದರೆ ಸಾಂಪ್ರದಾಯಿಕ ಆಚರಣೆಗಳು ಸಾಮಾನ್ಯ. ಇವುಗಳ ಜೊತೆ ಸಾಮಾಜಿಕ ಸಂದೇಶ ಸಾರುವ ಆಚರಣೆಗಳು ಕೂಡ ನಡೆಯುತ್ತಿವೆ. ಕಾರವಾರದ ಕೆ.ಹೆಚ್.ಬಿ ಕಾಲೋನಿ ಮಹಿಳೆಯರು ಇಂತಹದೊಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.
ಹೆಲ್ಮೆಟ್ ಧರಿಸಿ ದಾಂಡಿಯಾ ನೃತ್ಯ... ಕಾರವಾರದಲ್ಲಿ ಮಹಿಳೆಯರ ಕಾರ್ಯಕ್ಕೆ ಮೆಚ್ಚುಗೆ - ನವರಾತ್ರಿ ಹಬ್ಬ
ಉತ್ತರ ಕನ್ನಡ ಜಿಲ್ಲೆ ಕಾರವಾರದ ಕೆಹೆಚ್ಬಿ ಕಾಲೋನಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ನಡೆದ ದಾಂಡಿಯಾ ನೃತ್ಯ ಪ್ರದರ್ಶನ. ನೃತ್ಯಗಾರರು ಹೆಲ್ಮೆಟ್ ಧರಿಸಿ ಹೆಜ್ಜೆ ಹಾಕಿ, ಸಂಚಾರ ನಿಯಮ ಪಾಲನೆ ಮಾಡುವಂತೆ ಜಾಗೃತಿ ಮೂಡಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ದಾಂಡಿಯಾ ನೃತ್ಯದ ಮೂಲಕ ಸಂಚಾರಿ ನಿಯಮ ಜಾಗೃತಿ
ಹೌದು, ಮಹಿಳೆಯರು ತಲೆಗೆ ಹೆಲ್ಮೆಟ್ ಧರಿಸಿ ಸಾಂಪ್ರದಾಯಿಕ ದಾಂಡಿಯಾ ನೃತ್ಯ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ ಸಂದೇಶ ಸಾರಿದ್ದಾರೆ. ಕಳೆದ ಏಳು ದಿನಗಳಿಂದ ಕಾರವಾರ ನಗರದ 15ಕ್ಕೂ ಹೆಚ್ಚು ಕಡೆಗಳಲ್ಲಿ ದಾಂಡಿಯಾ ಕಾರ್ಯಕ್ರಮ ನಡೆಯುತ್ತಿದ್ದು, ಶನಿವಾರ ರಾತ್ರಿ ಕೆಹೆಚ್ಬಿ ಕಾಲೋನಿಯಲ್ಲಿ ನಡೆದ ದಾಂಡಿಯಾ ಕಾರ್ಯಕ್ರಮದಲ್ಲಿ ಆಕರ್ಷಕವಾಗಿ ಕಂಡು ಬಂತು.
ಪ್ರಮುಖವಾಗಿ ಹೆಲ್ಮೆಟ್ ಧರಿಸಿ, ದಂಡದ ಜೊತೆಗೆ ಜೀವ ರಕ್ಷಿಸಿಕೊಳ್ಳಿ ಎಂದು ಹೇಳುವ ಮೂಲಕ ಇಲ್ಲಿ ಜಾಗ್ರತಿ ಮೂಡಿಸಿದ್ದು ವಿಶೇಷ.
Last Updated : Oct 6, 2019, 1:20 PM IST