ಕರ್ನಾಟಕ

karnataka

ETV Bharat / state

ಜ. 5ರಿಂದ ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧ

ರಾಷ್ಟ್ರೀಯ ಹೆದ್ದಾರಿ-4ಎ ಅಲ್ಲಿ ಸಂಚರಿಸುವ ಲಘು ಹಾಗೂ ಭಾರಿ ವಾಹನಗಳಲ್ಲಿ ಪರ್ಯಾಯ ಮಾರ್ಗಗಳನ್ನು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Traffic ban on Ramnagar-Goa National Highway
ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧ

By ETV Bharat Karnataka Team

Published : Jan 4, 2024, 11:00 AM IST

ಕಾರವಾರ: ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ-ಅನಮೋಡ (ತಿನ್ನೇಘಾಟ) ನಡುವೆ ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿ-4ಎ ಅಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ನೈರುತ್ಯ ರೈಲ್ವೆ ವತಿಯಿಂದ (TGT-CLR Railway doubling Project) ರೈಲ್ವೆ ಹಳಿ ದ್ವಿಗುಣಗೊಳಿಸುವ ಕಾಮಗಾರಿ ನಡೆಯುವುದರಿಂದ ಜನವರಿ 5 ರಿಂದ 25ರ ವರೆಗೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ, ಅನುಮೋಡನಿಂದ ರಾಮನಗರ (ದಾಂಡೇಲಿ) ಕಡೆಗೆ ಹೋಗುವ ಲಘು ವಾಹನಗಳಿಗೆ ಅನುಮೋಡ-ಕ್ಯಾಸರಲಾಕ್ ಕ್ರಾಸ್-ಕ್ಯಾಸರಲಾಕ್-ಕುಣಗಿನಿ ಚೆಕ್‍ಪೋಸ್ಟ್- ಚಾಂದೇವಾಡಿ-ಜಗಲಬೇಟ್ ಮಾರ್ಗವಾಗಿ ಏಕಮುಖ ಸಂಚಾರ ಇರಲಿದೆ. ಹಾಗೆಯೇ, ರಾಮನಗರದಿಂದ ಅನುಮೋಡ ಹೋಗುವ ಲಘು ವಾಹನಗಳು ರಾಮನಗರ-ತಿನ್ನೇಘಾಟ-ಮಾರ್ಸಂಗಳ್ ಕ್ರಾಸ್-ಹೆಮ್ಮಡಗಾ ರೋಡ್- ಅನುಮೋಡ್ ಮಾರ್ಗವಾಗಿ ಏಕಮುಖವಾಗಿ ಸಂಚರಿಬೇಕಿದೆ. ಜೊತೆಗೆ, ಮಧ್ಯಮ ಮತ್ತು ಭಾರಿ ವಾಹನಗಳು ಆಳ್ನಾವರ-ಹಳಿಯಾಳ-ಯಲ್ಲಾಪುರ-ಕಾರವಾರ-ಗೋವಾ ಮಾರ್ಗದ ಮೂಲಕ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ವಿಜಯಪುರ ವಿಮಾನ ನಿಲ್ದಾಣಕ್ಕೆ ಸಚಿವ ಸತೀಶ್​ ಜಾರಕಿಹೊಳಿ ಭೇಟಿ: ಕಾಮಗಾರಿ ಪರಿಶೀಲನೆ

ABOUT THE AUTHOR

...view details