ಕಾರವಾರ:ವರ್ಷಾಂತ್ಯಕ್ಕೆ ಮಕ್ಕಳಿಗೆ ಸಾಲು ಸಾಲು ರಜೆಗಳು ದೊರಕಿವೆ. ಕ್ರಿಸ್‌ಮಸ್ ಜತೆಗೆ ನ್ಯೂ - ಇಯರ್ ಆಚರಣೆಯನ್ನು ಮಾಡಲು ಕುಟುಂಬ ಸಮೇತ ಪ್ರವಾಸಿ ತಾಣಗಳತ್ತ ಜನರು ಇದೀಗ ಮುಗಿ ಬೀಳುತ್ತಿದ್ದಾರೆ. ಆದರೆ, ಹೊಸ ವರ್ಷಾಚರಣೆ ಅಂದಾಕ್ಷಣ ಗೋವಾದತ್ತ ಮುಖಮಾಡುತ್ತಿದ್ದ ಪ್ರವಾಸಿಗರು ಈ ಬಾರಿ ಕಡಲನಗರಿಯತ್ತ ಲಗ್ಗೆ ಇಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನದಿಂದ ಈಗಾಗಲೇ ಬೀಚ್ಗಳು ಹೌಸ್ ಫುಲ್ ಆಗಿದ್ದು, ಕಡಲತೀರದಲ್ಲಿ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.
ಸದ್ಯ ಕ್ರಿಸ್‌ಮಸ್ ಕ್ರೇಜ್ನಲ್ಲಿರೋ ಜನರು ಇದೀಗ ನ್ಯೂ - ಇಯರನ್ನು ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 3 - 4 ದಿನಗಳಿಂದ ರಾಜ್ಯ ಹೊರರಾಜ್ಯದಿಂದ ಕಾರವಾರದ ಕಡಲ ತೀರದತ್ತ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ.
ಗೋವಾಕ್ಕೆ ಹೊಂದಿಕೊಂಡೇ ಇರುವ ಕಾರವಾರದಲ್ಲಿ ಹೆದ್ದಾರಿ ಪಕ್ಕದಲ್ಲೇ ವಿಶಾಲವಾದ ಬೀಚ್ ಇರುವುದರಿಂದ ಗೋವಾಕ್ಕೆ ತೆರಳುವ ಪ್ರವಾಸಿಗರು ಸಹ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಗೋವಾ ಕಡಲ ತೀರಗಳಿಗೆ ಹೋಲಿಸಿದರೆ ಕಾರವಾರದ ಠಾಗೋರ್ ಬೀಚ್ ಶಾಂತವಾಗಿದ್ದು, ಕಡಲತೀರದಲ್ಲಿ ಕಿಕ್ಕಿರಿದ ಜನಸಂದಣಿ ಇರುವುದಿಲ್ಲ. ಹೀಗಾಗಿ ಕುಟುಂಬಸ್ಥರು, ಮಕ್ಕಳೊಂದಿಗೆ ನೀರಿನಲ್ಲಿ ಈಜಾಡಿ ಎಂಜಾಯ್ ಮಾಡಲು ಠಾಗೋರ್ ಬೀಚ್‌ನತ್ತ ಆಗಮಿಸುತ್ತಿದ್ದಾರೆ. ಸುಂದರ ಪರಿಸರದ ನಡುವೆ ಠಾಗೋರ್ ಬೀಚ್ ಇದ್ದು ಸ್ವಚ್ಛತೆಯಿಂದ ಸಹ ಕೂಡಿರುವುದರಿಂದ ಕುಟುಂಬಸ್ಥರೊಂದಿಗೆ ಇಲ್ಲಿಗೆ ಹೊಸವರ್ಷಾಚರಣೆಗೆ ಆಗಮಿಸಿದ್ದೀವಿ ಅಂತಾರೇ ಪ್ರವಾಸಿಗರು.