ಭಟ್ಕಳ: ಪ್ರವಾಸಕ್ಕೆಂದು ಬಂದು ಸಮುದ್ರದಲ್ಲಿ ಈಜಾಡಲು ತೆರಳಿ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ಮುರುಡೇಶ್ವರ ಕಡಲ ತೀರದ ಲೈಫ್ ಗಾರ್ಡ್ಗಳ ಸಹಾಯದಿಂದ ರಕ್ಷಿಸಿ ದಡಕ್ಕೆ ಕರೆತಂದ ಘಟನೆ ಇಂದು ನಡೆದಿದೆ.
ಮುರುಡೇಶ್ವರ ಕಡಲ ತೀರದಲ್ಲಿ ಅಪಾಯಕ್ಕೆ ಸಿಲುಕಿದ ಪ್ರವಾಸಿಗನ ರಕ್ಷಣೆ - bhatkal uttarkannada latest news
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ನಿವಾಸಿ ಅಕ್ಷಯ ಪರಶುರಾಮ ವಾಡಗನ್ 11 ಜನ ಗೆಳೆಯರೊಂದಿಗೆ ಇಂದು ಮುರುಡೇಶ್ವರಕ್ಕೆ ಬಂದಿದ್ದರು. ಅಕ್ಷಯ್ ಅವರು ಮುರುಡೇಶ್ವರ ಕಡಲ ತೀರದಲ್ಲಿ ಸಮಸ್ಯೆಗೆ ಸಿಲುಕಿದ್ದು, ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಮುರುಡೇಶ್ವರ ಕಡಲ ತೀರದಲ್ಲಿ ಅಪಾಯಕ್ಕೆ ಸಿಲುಕಿದ ಪ್ರವಾಸಿಗನ ರಕ್ಷಣೆ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ನಿವಾಸಿ ಅಕ್ಷಯ ಪರಶುರಾಮ ವಾಡಗನ್ ಅಪಾಯದಿಂದ ಪಾರಾದ ವ್ಯಕ್ತಿ. ಇವರು 11 ಜನ ಗೆಳೆಯರೊಂದಿಗೆ ಇಂದು ಮುರುಡೇಶ್ವರಕ್ಕೆ ಬಂದಿದ್ದರು. ಎಲ್ಲರೂ ನೀರಿಗಿಳಿದು ಈಜಾಡಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಅಕ್ಷಯ ಅಪಾಯಕ್ಕೆ ಸಿಲುಕಿಕೊಂಡರು.
ಆ ವೇಳೆ, ಅಲ್ಲೇ ದಡದಲ್ಲಿದ್ದ ಲೈಫ್‍ಗಾರ್ಡ್ ಸಿಬ್ಬಂದಿ ರವಿ ಮಾದೇವ ಹರಿಕಾಂತ ಹಾಗೂ ಚಂದ್ರಶೇಖರ ಈಶ್ವರ ಹರಿಕಾಂತ ಅಪಾಯದಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ. ಸದ್ಯ ಈ ಕುರಿತು ಮುರುಡೇಶ್ವರ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿದ್ದಾರೆ.