ಕಾರವಾರ: ಮುರುಡೇಶ್ವರದಲ್ಲಿ ದುರಂತವೊಂದು ನಡೆದಿದೆ. ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದ ಪ್ರವಾಸಿಗರಲ್ಲಿ ಓರ್ವ ಸಾವನ್ನಪ್ಪಿದ್ದರೆ, ನಾಲ್ವರನ್ನು ರಕ್ಷಣೆ ಮಾಡಲಾಗಿದೆ.
ಮೀನುಗಾರರ ಮಾತು ಮೀರಿ ನೀರಿಗಿಳಿದ್ರು... ಸಮುದ್ರದ ಅಲೆಗಳಿಗೆ ಸಿಕ್ಕಿ ಪ್ರವಾಸಿಗ ಸಾವು - karwar district news
ಈಜಲು ಕಡಲಿಗಿಳಿದಿದ್ದವರಿಗೆ ಸ್ಥಳೀಯ ಮೀನುಗಾರರು ಅಲೆ ಅಬ್ಬರ ಜೋರಿದ್ದು ನೀರಿಗಿಳಿಯದಂತೆ ಎಚ್ಚರಿಸಿದ್ದರು. ಆದರೂ ನೀರಿಗಿಳಿದಿದ್ದ ಪ್ರವಾಸಿಗರ ಪೈಕಿ ಐವರು ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದರು. ಅದರಲ್ಲಿ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.
ಬೆಂಗಳೂರು ಮೂಲದ ರಾಜು ಎನ್ ಮೃತಪಟ್ಟ ವ್ಯಕ್ತಿ. ಪ್ರವಾಸಕ್ಕೆಂದು ಬೆಂಗಳೂರಿನಿಂದ 11 ಜನರನ್ನೊಳಗೊಂಡ ತಂಡ ಸಿಗಂದೂರು ಸೇರಿದಂತೆ ವಿವಿಧೆಡೆ ತೆರಳಿ ಶನಿವಾರ ಮುರುಡೇಶ್ವರಕ್ಕೆ ಆಗಮಿಸಿದ್ದರು. ಆದರೆ ಇಂದು ಬೆಳಗ್ಗೆ ಈಜಲು ಕಡಲಿಗಿಳಿದಿದ್ದವರಿಗೆ ಸ್ಥಳೀಯ ಮೀನುಗಾರರು ಅಲೆ ಅಬ್ಬರ ಜೋರಿದ್ದು, ನೀರಿಗಿಳಿಯದಂತೆ ಎಚ್ಚರಿಸಿದ್ದರು. ಆದರೂ ನೀರಿಗಿಳಿದಿದ್ದ ಪ್ರವಾಸಿಗರ ಪೈಕಿ ಐವರು ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದರು.ಅದರಲ್ಲಿ ನಾಲ್ವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದು, ಇನ್ನೋರ್ವ ನೀರು ಕುಡಿದಿದ್ದ, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.