ಕರ್ನಾಟಕ

karnataka

ETV Bharat / state

ಕೊಟ್ಟಿಗೆಗೆ ನುಗ್ಗಿ ಮೂರು ದನಗಳನ್ನು ಕೊಂದ ಹುಲಿ : ಅರಣ್ಯಾಧಿಕಾರಿ ವಿರುದ್ಧ ಸ್ಥಳೀಯರ ಆಕ್ರೋಶ

ಕೊಟ್ಟಿಗೆಯಲ್ಲಿ ಮೂರು ದನಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

Etv tiger-attacked-cows-in-karwar
ಕೊಟ್ಟಿಗೆಗೆ ನುಗ್ಗಿ ಮೂರು ದನಗಳನ್ನು ಕೊಂದ ಹುಲಿ : ಅರಣ್ಯಾಧಿಕಾರಿ ವಿರುದ್ಧ ಸ್ಥಳೀಯರ ಆಕ್ರೋಶ

By

Published : Dec 11, 2022, 5:33 PM IST

Updated : Dec 11, 2022, 5:56 PM IST

ಕೊಟ್ಟಿಗೆಗೆ ನುಗ್ಗಿ ಮೂರು ದನಗಳನ್ನು ಕೊಂದ ಹುಲಿ : ಅರಣ್ಯಾಧಿಕಾರಿ ವಿರುದ್ಧ ಸ್ಥಳೀಯರ ಆಕ್ರೋಶ

ಕಾರವಾರ :ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಮೇಲೆ ಹುಲಿ ದಾಳಿ ಮಾಡಿ ಮೂರು ಆಕಳುಗಳನ್ನು ಕೊಂದು ಹಾಕಿರುವ ಘಟನೆ ಜೋಯಿಡಾ ತಾಲೂಕಿನ ಪಣಸೋಲಿ ವನ್ಯಜೀವಿ ವಲಯದ ಉಳವಿಯ ಚಂದ್ರಾಳಿ ಎಂಬಲ್ಲಿ ನಡೆದಿದೆ.

ಗ್ರಾಮದ ದತ್ತಾ ಜಾನು ಶೆಳಪೆಕ‌ ಎಂಬವರ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ಹಸುಗಳನ್ನು ಹಾಗೂ ಪಕ್ಕದ ಮನೆಯ ಒಂದು ದನವನ್ನು ರಾತ್ರಿ ವೇಳೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಘಟನೆ ಸಂಬಂಧ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಹುಲಿ ನಿರಂತರವಾಗಿ ಓಡಾಟ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಸತ್ತ ಜಾನುವಾರುಗಳಿಗೆ ಪರಿಹಾರ ಕೊಟ್ಟರೆ ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ಈ ಕೂಡಲೇ ಹುಲಿಯನ್ನು ಹಿಡಿದು ಬೇರಡೆ ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದರು.

ಘಟನಾ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ರಶ್ಮಿ ದೇಸಾಯಿ, ಕೊಟ್ಟಿಗೆ ಭದ್ರವಾಗಿ ಇಲ್ಲದ ಕಾರಣ ಹುಲಿ ದಾಳಿ‌ ಮಾಡಿ ಮೂರು ದನಗಳನ್ನು‌ ಕೊಂದಿದೆ. ದನಗಳಿಗೆ ಸರ್ಕಾರದ ನಿಯಮದಂತೆ 60 ಸಾವಿರ ರೂ. ಪರಿಹಾರ ನೀಡಲಾಗುವುದು ಹಾಗೂ ಕೊಟ್ಟಿಗೆ ನಿರ್ಮಾಣಕ್ಕೆ ಇಡಿಸಿಯಿಂದ ಧನಸಹಾಯ ನೀಡಲಾಗುವುದು ಎಂದರು. ಅಲ್ಲದೆ ಒಂದು ವಾರ ಸಿಬ್ಬಂದಿ ಗಸ್ತು ಇಡಲಾಗುತ್ತಿದ್ದು, ಈ ಭಾಗದಲ್ಲಿ ಕ್ಯಾಮರಾ ಅಳವಡಿಸುವ ಭರವಸೆಯನ್ನು ನೀಡಿದರು.

ಇದನ್ನೂ ಓದಿ :ಚಿಕ್ಕಮಗಳೂರು: ಹುಲಿ ದಾಳಿಗೆ ಮೂರು ಹಸು ಬಲಿ..

Last Updated : Dec 11, 2022, 5:56 PM IST

ABOUT THE AUTHOR

...view details