ಕರ್ನಾಟಕ

karnataka

ETV Bharat / state

ಸಾಯಿಮಂದಿರಕ್ಕೆ ಬಡಿದ ಸಿಡಿಲು; ಗೋಡೆಗೆ ಹಾನಿ, ಸುಟ್ಟು ಕರಕಲಾದ ಪಾತ್ರೆಗಳು - ಸಾಯಿ ಮಂದಿರದ ಮೇಲೆ ಸಿಡಿಲು

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಾಯಿ ಮಂದಿರಕ್ಕೆ ಸಿಡಿಲು ಬಡಿದಿದ್ದು, ಗೋಡೆಗೆ ಹಾನಿಯಾಗಿರುವುದು ಮಾತ್ರವಲ್ಲದೇ, ಪಾತ್ರೆಗಳು ಸುಟ್ಟು ಕರಕಲಾಗಿವೆ.

thunderbolt-jolted-on-sai-mandir-in-uttara-kannada
ಸಾಯಿಮಂದಿರಕ್ಕೆ ಬಡಿದ ಸಿಡಿಲು; ಗೋಡೆಗೆ ಹಾನಿ, ಸುಟ್ಟು ಕರಕಲಾದ ಪಾತ್ರೆಗಳು

By

Published : Oct 23, 2021, 1:09 AM IST

ಕಾರವಾರ: ಸತ್ಯ ಸಾಯಿ ಮಂದಿರವೊಂದಕ್ಕೆ ಸಿಡಿಲು ಬಡಿದು ಮಂದಿರದಲ್ಲಿದ್ದ ಪಾತ್ರೆಗಳು ಸುಟ್ಟು ಕರಕಲಾಗಿರುವ ಘಟನೆ ಸಿದ್ದಾಪುರ ತಾಲೂಕಿನ ಮಾದಲಮನೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಸಿದ್ದಾಪುರ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಹೊತ್ತಿಗೆ ಭಾರಿ ಗುಡುಗು ಮಳೆ ನಡುವೆ ಸಿಡಿಲೊಂದು ದೇವಾಲಯಕ್ಕೆ ಅಪ್ಪಳಿಸಿದ್ದು, ದೇವಾಲಯದ ಒಂದು ಗೋಡೆಗೆ ಹಾನಿಯಾಗಿದೆ.

ಸಾಯಿ ಮಂದಿರದ ಮೇಲೆ ಬಿದ್ದ ಸಿಡಿಲು

ಅಷ್ಟು ಮಾತ್ರವಲ್ಲದೆ ದೇವಾಲಯದ ಒಳಭಾಗದಲ್ಲಿದ್ದ ಅಲ್ಯೂಮಿನಿಯಂ ಪಾತ್ರೆಗಳಿಗೆ ಸಿಡಿಲು ಬಿದ್ದು ಪಾತ್ರೆಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ.

ಉತ್ತರಕನ್ನಡ ಜಿಲ್ಲೆಯಾದ್ಯಂತ ಕಳೆದ ಎರಡು ದಿನದಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಶುಕ್ರವಾರ ಮುಂಜಾನೆಯಿಂದ ಭಾರಿ ಗಾಳಿ ಸಹಿತ ಗುಡುಗಿನೊಂದಿಗೆ ಮಳೆಯಾಗಿತ್ತು. ನಂತರ ಕಡಿಮೆಯಾಗಿ ಸಂಜೆ ಹೊತ್ತಿಗೆ ಮತ್ತೆ ಮಳೆಯಾಗಿದೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ಪ್ರಯಾಣಿಕರು ಬರುತ್ತಿದ್ರೂ ನಿಯಂತ್ರಣದಲ್ಲಿದೆ ಕೊರೊನಾ ಸೋಂಕು..

ABOUT THE AUTHOR

...view details