ಕಾರವಾರ: ಸಣ್ಣದಾಗಿ ಮಳೆ ಬರುತ್ತಿರುವ ಕಾರಣ ದೋಣಿ ಕೆಳಗೆ ಆಶ್ರಯ ಪಡೆಯಲು ತೆರಳಿದ ನಾಲ್ವರು ಮೀನುಗಾರರಿಗೆ ಸಿಡಿಲು ಬಡಿದು ಗಾಯಗೊಂಡಿರುವ ಘಟನೆ ಕಾರವಾರ ತಾಲೂಕಿನ ಮುದಗಾ ಬಂದರಿನ ಬಳಿ ಬುಧವಾರ ಸಂಜೆ ನಡೆದಿದೆ.
ಮಳೆ ಎಂದು ದೋಣಿ ಕೆಳಗೆ ಹೋದವರನ್ನೂ ಬಿಡಲಿಲ್ಲ ಸಿಡಿಲು...ನಾಲ್ವರಿಗೆ ಗಾಯ - latest karavara news
ಮಳೆ ಬರುತ್ತಿರುವ ಕಾರಣ ದೋಣಿ ಕೆಳಗೆ ಆಶ್ರಯ ಪಡೆಯಲು ತೆರಳಿದ ನಾಲ್ವರು ಮೀನುಗಾರರಿಗೆ ಸಿಡಿಲು ಬಡಿದು ಗಾಯಗೊಂಡಿರುವ ಘಟನೆ ಕಾರವಾರ ತಾಲೂಕಿನ ಮುದಗಾ ಬಂದರಿನ ಬಳಿ ಬುಧವಾರ ಸಂಜೆ ನಡೆದಿದೆ.

ಹಾರವಾಡ ಮೂಲದ ಬಂಟ ಹರಿಕಂತ್ರ, ಮಧು ಹರಿಕಂತ್ರ, ಬೈತಖೋಲ್‌ನ ನಿತ್ಯ ದುರ್ಗೇಕರ್ ಹಾಗೂ ಒಡಿಶಾದ ಅಜಯ್ ಕಿಶನ್ ಸಿಡಿಲು ಬಡಿದು ಗಾಯಗೊಂಡ ದುರ್ದೈವಿಗಳು. ಕಾರವಾರದಲ್ಲಿ ಕಳೆದ ಎರಡು ದಿನದಿಂದ ಸಂಜೆ ಹೊತ್ತಿಗೆ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದ್ದು, ಇಂದು ಸಹ ಗುಡುಗು ಮಿಂಚಿನ ಜತೆ ಸಣ್ಣ ಮಳೆಯಾಗಿತ್ತು. ಈ ವೇಳೆ ಮಳೆಯಿಂದ ದೋಣಿ ಕೆಳಗೆ ನಾಲ್ವರು ಮೀನುಗಾರು ಕುಳಿತಿದ್ದರು.
ಈ ವೇಳೆ ಸಿಡಿಲು ಬಡಿದ ಪರಿಣಾಮ ಬಂಟ ಹರಿಕಂತ್ರ ಅವರ ತಲೆಗೆ ಹಾಗೂ ಮಧು ಹರಿಕಂತ್ರ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಅಜಯ್ ಕಿಶನ್ ಎಂಬುವವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ನಿತ್ಯ ಅವರ ತಲೆಗೆ ಸ್ವಲ್ಪ ಪ್ರಮಾಣದಲ್ಲಿ ಸಿಡಿಲು ತಾಗಿದೆ. ಈ ನಾಲ್ವರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.