ಶಿರಸಿ (ಉತ್ತರ ಕನ್ನಡ):ಬೆಳಗಾವಿಯಿಂದ ಸಿದ್ದಾಪುರದ ಕಡೆಗೆ ಬರುತ್ತಿದ್ದ ಮೂವರನ್ನು ರಸ್ತೆ ಮಧ್ಯೆ ನಿಲ್ಲಿಸಿ, 50 ಲಕ್ಷ ರೂಪಾಯಿ ಹಣ ದೋಚಿದ ಆತಂಕಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಬಳಿ ನಡೆದಿದೆ.
ಬೆಳಗಾವಿಯಿಂದ ಸೈಟ್ ನೋಡಿಕೊಂಡು ಕಾರಿನಲ್ಲಿ ಬರುತ್ತಿದ್ದ ಸಿದ್ದಾಪುರ ತಾಲೂಕಿನ ನೆಜ್ಜೂರಿನ ಹಸೇನ್ ಜಾವೇದ್ ಖಾನ್ (25) ಹಾಗೂ ಇತರ ಇಬ್ಬರು ಬರುತ್ತಿದ್ದರು. ಬನವಾಸಿಯ ಅಂಡಗಿ ಕ್ರಾಸ್ ಚನ್ನಗಿರಿ ಬಸ್ ನಿಲ್ದಾಣ ಸಮೀಪ ಇರುವಾಗ ಹಿಂದಿನಿಂದ ಕೆಂಪು ಬಣ್ಣದ ಕಾರೊಂದರಲ್ಲಿ ಬಂದ 5-6 ಜನರ ತಂಡ ಬೆದರಿಸಿ 50 ಲಕ್ಷ ರೂ. ಹಣ ದೋಚಿದೆ.