ಕಾರವಾರ: ಕಡಲಿನಲ್ಲಿ ಈಜುತ್ತಿರುವಾಗ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಕುಡ್ಲೆ ಬೀಚಿನಲ್ಲಿ ನಡೆದಿದೆ.
ಕುಡ್ಲೆ ಬೀಚ್ನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ - ಕಾರವಾರ ಸುದ್ದಿ
ಕುಮಟಾ ತಾಲ್ಲೂಕಿನ ಗೋಕರ್ಣದ ಕುಡ್ಲೆ ಬೀಚಿನಲ್ಲಿ ಈಜುತ್ತಿರುವಾಗ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬೆಂಗಳೂರು ಮೂಲದ ಮೂವರು ಪ್ರವಾಸಿಗರನ್ನು ಲೈಫ್ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
![ಕುಡ್ಲೆ ಬೀಚ್ನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ](https://etvbharatimages.akamaized.net/etvbharat/prod-images/768-512-4797616-843-4797616-1571429259824.jpg)
ಬೆಂಗಳೂರು ಮೂಲದ ಕೆರೋಲಿನ್ ಶಿಲ್ವಿಯಾ, ನಿಶ್ಚಿತ್ ಸಿ. ಹಾಗೂ ಸುಜಿತ್ ಎಂಬ ಮೂವರು ಯುವಕರನ್ನು ರಕ್ಷಿಸಲಾಗಿದೆ. ಬೆಂಗಳೂರನಿಂದ ಪ್ರವಾಸಕ್ಕೆಂದು ಆಗಮಿಸಿದ ಐವರು ಕಡಲತೀರದಲ್ಲಿ ಈಜುತ್ತಿದ್ದರು. ಈ ವೇಳೆ ನಿಶ್ಚಿತ್ ಮತ್ತು ಕೆರೋಲಿನ್ ಈಜುತ್ತಿರುವಾಗ ಅಲೆಗೆ ಕೊಚ್ಚಿ ಹೋಗಿದ್ದಾರೆ.
ಸ್ನೇಹಿತರು ಕೊಚ್ಚಿಹೋಗುತ್ತಿರವುದನ್ನು ಗಮನಿಸಿದ ಸುಜಿತ್ ಎಂಬಾತ ಅವರಿಬ್ಬರನ್ನು ರಕ್ಷಿಸಲು ಮುಂದಾದಾಗ ಆತನ ಕೂಡ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ. ತಕ್ಷಣ ಇವರ ಜೊತೆಗಿದ್ದ ಮತ್ತಿಬ್ಬರು ಸ್ನೇಹಿತರು ಕೂಗಿಕೊಂಡಿದ್ದಾರೆ. ತಕ್ಷಣ ಕಾರ್ಯಪ್ರವೃ ತ್ತರಾದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಸಂಜೀವ ಹೊಸಕಟ್ಟಾ, ರಘುವೀರ ಅಂಬಿಗ, ಕುಮಾರ್ ಅಂಬಿಗ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.
TAGGED:
ಕಾರವಾರ ಸುದ್ದಿ