ಶಿರಸಿ (ಉತ್ತರ ಕನ್ನಡ) :ರಾಜ್ಯದಲ್ಲಿ ಈ ಸಲ ಬಿಜೆಪಿಯ ಹಿಂದುತ್ವ ಕೆಲಸ ಮಾಡಲ್ಲ. ಜನರಿಗೆ ಸತ್ಯದ ಅರಿವಾಗಿದೆ. ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಬಂದಾಗ ಬಿಜೆಪಿಗೆ ದುರ್ಬುದ್ಧಿ ಬರುತ್ತದೆ ಎಂದರು.
ಬಿಜೆಪಿಯವರು ಒಳ್ಳೆಯ ಕೆಲಸ ಮಾಡಲು ಆಗದಾಗ ಬೆಂಕಿ ಹಚ್ಚುತ್ತಾರೆ. ಆದರೆ ಈ ಸಲ ಇದ್ಯಾವುದನ್ನೂ ನಂಬುವ ಸ್ಥಿತಿಯಲ್ಲಿ ರಾಜ್ಯದ ಜನರಿಲ್ಲ. ಬಡವರಿಗೆ ಮನೆ ಕಟ್ಟಲು ಯೋಗ್ಯತೆ ಇಲ್ಲದವರು ಹಿಂದುತ್ವದ ಭಾಷಣ ಬಿಗಿಯುತ್ತಾರೆ. ಹಿಂದೂ ಸಮಾಜದಲ್ಲಿ ಹುಟ್ಟಿದ ಸಿದ್ದರಾಮಯ್ಯನವರಿಗೆ ಸಿದ್ರಾಮುಲ್ಲಾ ಖಾನ್ ಎನ್ನುವ ಸಿ.ಟಿ.ರವಿ ಮೊದಲ ಹಿಂದು ವಿರೋಧಿ ಎಂದು ವಾಗ್ದಾಳಿ ನಡೆಸಿದರು.