ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ತಲೆ ಎತ್ತಿದೆಯಾ ದನ ಕಳ್ಳತನದ ಜಾಲ...? ಈ ಬಗ್ಗೆ ಸ್ಥಳೀಯರು ಹೇಳುವುದು ಹೀಗೆ..! - cow rhieves latest news

ಭಟ್ಕಳ ತಾಲೂಕಿನಲ್ಲಿ ಲಾಕ್​ಡೌನ್​ ಆದ ದಿನದಿಂದ ದನ ಕಳ್ಳತನ ಪ್ರಕರಣಗಳು ದಿನೇ- ದಿನೆ ಬೆಳಕಿಗೆ ಬರುತ್ತಿದ್ದು, ದನ ಕದ್ದು ಕಡಿದು ಮಾಂಸ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

thieves-theft-cow
ಭಟ್ಕಳದಲ್ಲಿ ತಲೆ ಎತ್ತಿದೆಯಾ ದನ ಕಳ್ಳತನದ ಜಾಲಾ

By

Published : Apr 27, 2020, 9:45 PM IST

ಭಟ್ಕಳ :ತಾಲೂಕಿನ ಜಾಲಿ, ತಲಗೇರಿ ವ್ಯಾಪ್ತಿಯಲ್ಲಿ ಮನೆಯಲ್ಲಿ ಕಟ್ಟಿರುವ ದನ, ಕರುಗಳನ್ನು ರಾತ್ರೋ ರಾತ್ರಿ ಹಗ್ಗ ಸಮೇತ ಕದ್ದು ಜಾಲಿ ವ್ಯಾಪ್ತಿಯ ಮೈದಾನದಲ್ಲಿ ದನ ಕಡಿದು ಮಾಂಸ ತೆಗೆದು ಸಾಗಿಸುವ ತಂಡವೊಂದು ಸಜ್ಜಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಲಾಕ್​ಡೌನ್ ಆರಂಭದ ದಿನದಿಂದ ದನಗಳ್ಳತನ ನಡೆಯುತ್ತಿರುವ ಬಗ್ಗೆ ದನ ಕಳೆದುಕೊಂಡ ಜನರು ಮಾಹಿತಿ ನೀಡಿದ್ದು, ಒಂದೇ ಮನೆಯ ಎರಡು ದನ, ಇನ್ನೊಂದು ಮನೆಯ ಕರು ಸಮೇತ ಈಗಾಗಲೇ 10-12 ಮನೆಗಳ ದನಕರುಗಳು ವಾಪಸ್​ ಬಂದಿಲ್ಲ,‌ ದನ ಮನೆಗೆ ಬಾರದೇ ಇರುವ ಹಿನ್ನೆಲೆ ದನದ ಮಾಲೀಕರೊಬ್ಬರು ನಿತ್ಯ ದನ ಮೇಯಲು ಹೋಗುವ ಸ್ಥಳದಲ್ಲೆಲ್ಲ ಹುಡುಕಾಟ ನಡೆಸಿದಾಗ, ದನಗಳನ್ನು ಕಡಿದಿರುವ ಕುರುಹುಗಳು ಕಂಡು ಬಂದಿದ್ದು, ದನದ ಹೊಟ್ಟೆಯೊಳಗಿನ ತ್ಯಾಜ್ಯ ಹಾಗೂ ಕೆಲವು ಕಡೆ ದನದ ರುಂಡಗಳೆಲ್ಲ ಕಂಡು ಬಂದಿವೆ.

ಭಟ್ಕಳದಲ್ಲಿ ತಲೆ ಎತ್ತಿದೆಯಾ ದನ ಕಳ್ಳತನದ ಜಾಲಾ

ದನಗಳ್ಳರ ತಂಡ :

ಲಾಕ್​​ಡೌನ್​ ಆದ ದಿನದಿಂದ ಇತ್ತೀಚಿನ ದಿನದಲ್ಲಿ ಜಾಲಿ ಸುತ್ತಮುತ್ತಲಿನ ಪ್ರದೇಶದಲ್ಲಿ 3 - 4 ಜನರುಳ್ಳ ದನಗಳ್ಳತನ ಮಾಡಿ ಅದನ್ನು ಕಡಿದು ಸಾಗಣೆ ಮಾಡುವ ಅಕ್ರಮ ಕೆಲಸದ ತಂಡವೊಂದು ಈ ಕುಕೃತ್ಯ ನಡೆಸುತ್ತಿದೆ. ಈ ಬಗ್ಗೆ ತಕ್ಷಣವೇ ಪೊಲೀಸ್​ ಇಲಾಖೆ ಬಂಧಿಸಿ ಶಿಕ್ಷಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ದನ ಕಳೆದುಕೊಂಡ ಜನರು.

ABOUT THE AUTHOR

...view details